ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ ಗಡಿಯಲ್ಲಿ ಚೀನಾ ನಿರ್ಮಿತ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್‌ ಯೋಧರು

Last Updated 18 ಡಿಸೆಂಬರ್ 2021, 12:55 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ವ್ಯಾಪ್ತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿಗೆ 300 ಮೀಟರ್ ದೂರದಲ್ಲಿ, ಚೀನಾ ನಿರ್ಮಿತ ‘ಡ್ರೋನ್‌’ ಅನ್ನು ಶುಕ್ರವಾರ ಬಿಎಸ್ಎಫ್‌ ಯೋಧರು ಹೊಡೆದುರುಳಿಸಿದ್ದಾರೆ.

ಫಿರೋಜ್‌ಪುರ್‌ ವಲಯದ ವಾನ್‌ ಗಡಿಯಲ್ಲಿ ರಾತ್ರಿ 11.10ರ ವೇಳೆಗೆ ಕಪ್ಪುಬಣ್ಣದ ಡ್ರೋನ್‌ ಹಾರಾಟ ನಡೆದಿದ್ದು, ಗುರುತಿಸಿ, ಉರುಳಿಸಲಾಯಿತು. ಗಡಿಬೇಲಿಗೆ 150 ಮೀಟರ್ ದೂರದಲ್ಲಿ ಹಾರಾಟ ನಡೆಯುತ್ತಿತ್ತು.

ಹೆಕ್ಸಾ ಕಾಪ್ಟರ್‌, ನಾಲ್ಕು ಶಕ್ತಿಶಾಲಿ ಬ್ಯಾಟರಿ ಅಳವಡಿಸಿದ್ದ ಈ ಡ್ರೋನ್‌ನ ತೂಕ ಸುಮಾರು 23 ಕೆ.ಜಿ. ಒಟ್ಟು 10 ಕೆ.ಜಿಯಷ್ಟು ತೂಕದ ವಸ್ತುವನ್ನು ಒಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿತ್ತು. ಆದರೆ, ಈಗ ಹೊಡೆದುರುಳಿಸಿದ ಡ್ರೋನ್‌ನಲ್ಲಿ ಮಾದಕವಸ್ತು, ಶಸ್ತ್ರಾಸ್ತ್ರಗಳು ಇರಲಿಲ್ಲ ಎಂದು ಬಿಎಸ್‌ಎಫ್‌ ಹೇಳಿಕೆಯಲ್ಲಿ ತಿಳಿಸಿದೆ.

ಡ್ರೋನ್‌ ಕಂಡುಬಂದಿದ್ದ ಪ್ರದೇಶದ ಸುತ್ತಲೂ ತಪಾಸಣೆ ನಡೆದಿದೆ. ಈ ಹಿಂದೆಯೂ ಪಂಜಾಬ್‌ಗೆ ಹೊಂದಿಕೊಂಡ ಪ್ರಾಂತ್ಯದಲ್ಲೇ ಪಾಕ್ ಮೂಲದಿಂದ ಬಂದಿದ್ದ ಎರಡು ಡ್ರೋನ್‌ ಅನ್ನು ಯೋಧರು ಹೊಡೆದುರುಳಿಸಿದ್ದರು.

ಬಿಎಸ್ಎಫ್‌ ಮಹಾನಿರ್ದೇಶಕ (ಡಿಜಿ) ಪಂಕಜ್‌ ಕುಮಾರ್ ಸಿಂಗ್ ಅವರು ಗಡಿಯುದ್ಧಕ್ಕೂ ಪಂಜಾಬ್ ಹಾಗೂ ಜಮ್ಮು ವಲಯಕ್ಕೆ ಹೊಂದಿಕೊಂಡಂತೆ ಇದೇ ವರ್ಷ 67 ಡ್ರೋನ್‌ಗಳು ಹಾರಾಟ ನಡೆಸಿದ್ದು, ಕಂಡುಬಂದಿವೆ ಎಂದು ತಿಳಿಸಿದರು.

ಪ್ರಸ್ತುತ, ದೇಶದ ಗಡಿಯೊಳಗೆ ಕಾಣಿಸಿಕೊಳ್ಳುತ್ತಿರುವ ಡ್ರೋನ್‌ಗಳ ತರಂಗಾಂತರ ವ್ಯಾಪ್ತಿ ಕಡಿಮೆ. ಬಹುತೇಕ ಇವು ಚೀನಾ ನಿರ್ಮಿತವಾಗಿದ್ದು, ಉತ್ತಮ ಗುಣಮಟ್ಟದ್ದಾಗಿವೆ. ಅಲ್ಪ ತೂಕದ ವಸ್ತುಗಳನ್ನು ಸಾಗಿಸಬಲ್ಲವಾಗಿವೆ. ಶೇ 95ರಷ್ಟು ಪ್ರಕರಣಗಳಲ್ಲಿ ಮಾದಕ ವಸ್ತುಗಳನ್ನು ಸಾಗಿಸಲಾಗಿದೆ ಎಂದು ಈಚೆಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT