ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ವಿ.ವಾಹಿನಿಗಳ ಉಪಗ್ರಹ ಸಂಪರ್ಕ ಸೇವೆ: ಶೀಘ್ರವೇ ನಿರ್ಬಂಧ ಸಡಿಲ -ಕೇಂದ್ರ ಸರ್ಕಾರ

Last Updated 28 ಅಕ್ಟೋಬರ್ 2022, 11:34 IST
ಅಕ್ಷರ ಗಾತ್ರ

ನವದೆಹಲಿ: ಟಿ.ವಿ ವಾಹಿನಿಗಳಿಗೆ ಉಪಗ್ರಹಗಳ ಸಂಪರ್ಕ ಕಲ್ಪಿಸಲು ಸದ್ಯ ಭಾರತದಲ್ಲಿ ಇರುವ ನಿರ್ಬಂಧಗಳನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಸಡಿಲಿಸಲಿದೆ.

ಶುಕ್ರವಾರ ಇಲ್ಲಿ ನಡೆದ ‘ಭಾರತ ಬಾಹ್ಯಾಕಾಶ ಸಮಾವೇಶ’ದಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅಪೂರ್ವಚಂದ್ರ ಈ ಮಾಹಿತಿ ನೀಡಿದರು. ‍ಪ್ರಸ್ತುತ, ಭಾರತದಲ್ಲಿ 898 ಟಿ.ವಿ.ವಾಹಿನಿಗಳು ಇದ್ದು, 532 ವಾಹಿನಿಗಳು ತಮ್ಮ ಕಾರ್ಯಕ್ರಮಗಳ ಪ್ರಸಾರಕ್ಕಾಗಿ ವಿದೇಶಿ ಉಪಗ್ರಹಗಳನ್ನು ಅವಲಂಬಿಸಿವೆ.

ಭಾರತವು ಉಪಗ್ರಹಗಳ ಸಂಪರ್ಕ ಕೇಂದ್ರವಾಗಬೇಕು ಎಂಬ ಹಿನ್ನೆಲೆಯಲ್ಲಿ ಈ ನಿರ್ಬಂಧ ಸಡಿಲಿಸಲು ನಿರ್ಧರಿಸಲಾಗಿದೆ. ಉಪಗ್ರಹ ಸಂಪರ್ಕ ಕುರಿತ ಮಾರ್ಗದರ್ಶಿ ಸೂತ್ರಗಳನ್ನು 2011ರಲ್ಲಿ ನೀಡಲಾಗಿತ್ತು. ಈಗ ಅದನ್ನು ತಿಂಗಳೊಳಗೆ ಪರಿಷ್ಕರಿಸಲಾಗುವುದು.ಪ್ರಸ್ತುತ ನೆರೆಯ ನೇಪಾಳ, ಶ್ರೀಲಂಕಾ, ಭೂತಾನ್‌ನ ವಾಹಿನಿಗಳೂ ಭಾರತದಿಂದಲೇ ತಮ್ಮ ಕಾರ್ಯಕ್ರಮಗಳನ್ನು ಉಪಗ್ರಹಕ್ಕೆ ಸಂಪರ್ಕ ಕಲ್ಪಿಸುತ್ತಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT