ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆಗೊಳಪಡುವ ಸುಳಿವಿನಿಂದಾಗಿ ಚೋಕ್ಸಿ ದೇಶ ತೊರೆದ: ಸಿಬಿಐ ಆರೋಪ

Last Updated 17 ಜೂನ್ 2021, 16:25 IST
ಅಕ್ಷರ ಗಾತ್ರ

ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ) 2017ರಲ್ಲಿ ತನ್ನನ್ನು ವಿಚಾರಣೆಗೆ ಒಳಪಡಿಸಬಹುದು ಎಂಬ ಸುಳಿವು ವಜ್ರವ್ಯಾಪಾರಿ ಮೆಹುಲ್‌ ಚೋಕ್ಸಿಗೆ ಇತ್ತು. ಇದೇ ಕಾರಣಕ್ಕೆ ಆತ ದೇಶ ತೊರೆದಿದ್ದಲ್ಲದೇ ಸಾಕ್ಷ್ಯಗಳನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ.

ಚೋಕ್ಸಿ ವಿರುದ್ಧ ಸಲ್ಲಿಸಿರುವ ಪೂರಕ ಚಾರ್ಜ್‌ಶೀಟ್‌ನಲ್ಲಿ ಸಿಬಿಐ ಈ ವಿಷಯವನ್ನು ಉಲ್ಲೇಖಿಸಿದೆ. ಸಾಕ್ಷ್ಯಗಳ ನಾಶಕ್ಕೆ ಯತ್ನ ಆರೋಪಕ್ಕೆ ಸಂಬಂಧಿಸಿ ಐಪಿಸಿ ಸೆಕ್ಷನ್‌ 201ಅಡಿ ಪ್ರಕರಣ ದಾಖಲಿಸಿಕೊಂಡಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಚೋಕ್ಸಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

‘ಸಾಲ ಪಡೆಯುವ ವೇಳೆ ಬ್ಯಾಂಕಿಗೆ ಒದಗಿಸಲಾಗಿದ್ದ ಎಲ್ಲ ದಾಖಲೆಪತ್ರಗಳ ಮೂಲಪ್ರತಿಗಳನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಉಪವ್ಯವಸ್ಥಾಪಕ ಗೋಕುಲನಾಥ್‌ ಶೆಟ್ಟಿ ಅವರಿಂದ ಚೋಕ್ಸಿ 2017ರ ಮೇ ಹಾಗೂ ಏಪ್ರಿಲ್‌ನಲ್ಲಿ ಹಿಂಪಡೆದಿದ್ದಾರೆ’ ಎಂದು ಸಿಬಿಐ ಆರೋಪಿಸಿದೆ.

‘ದಾಖಲೆಗಳನ್ನು ಹಿಂದಿರುಗಿಸುವ ಮೂಲಕ ಶೆಟ್ಟಿ ಅವರು ಸಹ ವಂಚಿಸಿದ್ದಾರೆ. ಸಾಲಕ್ಕಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಹಾಗೂ ಇತರ ದಾಖಲೆಪತ್ರಗಳನ್ನು ಶೋಧ ಕಾರ್ಯದ ವೇಳೆ ವಶಪಡಿಸಿಕೊಳ್ಳಲಾಗಿದೆ’ ಎಂದೂ ಸಿಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT