ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ವಾನ್‌ ಘರ್ಷಣೆ: ಹುತಾತ್ಮ ಕರ್ನಲ್‌ ಸಂತೋಷ್ ಬಾಬುಗೆ 'ಮಹಾವೀರ ಚಕ್ರ'

Last Updated 25 ಜನವರಿ 2021, 15:33 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಚೀನಾ ಸೇನೆಯ ನಡುವೆ ನಡೆದ ಗಾಲ್ವಾನ್‌ ಘರ್ಷಣೆಯಲ್ಲಿ ಸಾವಿಗೀಡಾದ ಕರ್ನಲ್‌ ಸಂತೋಷ್‌ ಬಾಬು ಅವರಿಗೆ ಮರಣೋತ್ತರ 'ಮಹಾವೀರ ಚಕ್ರ' ಘೋಷಣೆಯಾಗಿದೆ.

ಕಳೆದ ವರ್ಷ ಜೂನ್‌ನಲ್ಲಿ ಲಡಾಖ್‌ನ ಪೂರ್ವಭಾಗದ ಗಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಬಾಬು ಹುತಾತ್ಮರಾದರು.

2004ರಲ್ಲಿ ಸೇನೆಗೆ ಸೇರಿದ್ದ ಬಾಬು, ಜಮ್ಮು ಮತ್ತು ಕಾಶ್ಮೀರದಲ್ಲಿ ವೃತ್ತಿ ಆರಂಭಿಸಿದ್ದರು. ಅವರು ತೆಲಂಗಾಣದ ಸೂರ್ಯಪೇಟೆಯವರು. ಬಿಹಾರದ–16 ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಬು ಅವರು ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT