ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಕೃಷಿ ಕಾಯ್ದೆಗಳು ಕೃಷಿಕರನ್ನು ಗುಲಾಮರಾಗಿಸುತ್ತವೆ: ರಾಹುಲ್ ಗಾಂಧಿ

Last Updated 25 ಸೆಪ್ಟೆಂಬರ್ 2020, 7:56 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಕೃಷಿ ಮಸೂದೆಗಳು ರೈತರನ್ನು ಗುಲಾಮಗಿರಿಯತ್ತ ಒಯ್ಯಲಿದ್ದು, ಕನಿಷ್ಠ ಬೆಂಬಲ ಬೆಲೆ ಅವಕಾಶವನ್ನು ಕಸಿಯಲಿವೆ ಎಂದು ಟೀಕಿಸಿರುವ ಕಾಂಗ್ರೆಸ್ ಪಕ್ಷ, ಕೃಷಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿದೆ.

ಮೂರು ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ ವಿವಿಧ ಕೃಷಿಕ ಸಂಘಟನೆಗಳು ಶುಕ್ರವಾರ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ. ಈ ಮಸೂದೆಗಳನ್ನು ಸಂಸತ್ತು ಅಂಗೀಕರಿಸಿದ್ದು, ರಾಷ್ಟ್ರಪತಿ ಅಂಕಿತ ದೊರೆಯಬೇಕಿದೆ.

ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಣದೀಪ್ ಸುರ್ಜೆವಾಲಾ ಅವರು ಈ ಮಸೂದೆಗಳ ಪರಿಣಾಮ ಕುರಿತು ಮಾತನಾಡಿದ್ದು, ಬಂದ್ ಅನ್ನು ಬೆಂಬಲಿಸಿದ್ದಾರೆ.

ದೋಷಪೂರಿತ ಜಿ.ಎಸ್.ಟಿ ಸಣ್ಣ ಉದ್ದಿಮೆಗಳನ್ನು ನಾಶಪಡಿಸಿತು. ನೂತನ ಕೃಷಿ ಕಾಯ್ದೆಗಳು ಕೃಷಿಕರನ್ನು ಗುಲಾಮರಾಗಿಸುತ್ತವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಹೊಸ ಮಸೂದೆಯು ಕೃಷಿಕರಿಗೆ ಇರುವ ಕನಿಷ್ಠ ಬೆಂಬಲ ಬೆಲೆ ಅವಕಾಶವನ್ನು ಕಸಿದುಕೊಳ್ಳುತ್ತದೆ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. ರೈತರಿಗೆ ಬೆಲೆಯು ಸಿಗುವುದಿಲ್ಲ, ಗೌರವವೂ ಸಿಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಕೃಷಿಕರು ಕರೆ ನೀಡಿರುವ ಭಾರತ್ ಬಂದ್ ಅನ್ನು ಪಕ್ಷ ಬೆಂಬಲಿಸಲಿದೆ. ದೇಶದ ಕೃಷಿಕರ ಬದುಕನ್ನು ಮೋದಿ ಸರ್ಕಾರ ಕಸಿದುಕೊಳ್ಳುತ್ತಿದ್ದು, ರೈತರ ಮೇಲೆ ದಾಳಿ ನಡೆಸಿದೆ ಎಂದು ಸುರ್ಜೆವಾಲಾ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT