ಸೋಮವಾರ, ಜೂನ್ 14, 2021
22 °C

ಪಾಸಿಟಿವ್‌ ದರ: ಕರ್ನಾಟಕದ 26 ಜಿಲ್ಲೆಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಒಟ್ಟು 734 ಜಿಲ್ಲೆಗಳ ಪೈಕಿ 310 ಜಿಲ್ಲೆಗಳಲ್ಲಿ ಕೋವಿಡ್‌ ದೃಢಪಡುವಿಕೆ ದರವು (ಪಾಸಿಟಿವ್‌ ದರ) ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಇದೆ. ಈ ಜಿಲ್ಲೆಗಳಲ್ಲಿ ಕರ್ನಾಟಕದ 26 ಜಿಲ್ಲೆಗಳು ಸೇರಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 

ಪಾಸಿಟಿವ್‌ ದರದಲ್ಲಿ ಉತ್ತರ ಕನ್ನಡ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಪಾಸಿಟಿವ್‌ ಪ್ರಮಾಣ ಶೇ 45.7. ನಂತರದ ಸ್ಥಾನಗಳಲ್ಲಿ ಬಳ್ಳಾರಿ (ಶೇ 44.3), ಹಾಸನ (ಶೇ 42.1) ಮತ್ತು ಮೈಸೂರು (ಶೇ 41.3) ಇವೆ. ಪಾಸಿಟಿವ್‌ ಪ್ರಮಾಣದ ರಾಷ್ಟ್ರೀಯ ಸರಾಸರಿ ಶೇ 21ರಷ್ಟಿದೆ. ಪಾಸಿಟಿವ್‌ ದರ ಎಂದರೆ ಪರೀಕ್ಷೆ ಮಾಡಿಸಿಕೊಳ್ಳುವವರಲ್ಲಿ ಕೋವಿಡ್‌ ದೃಢಪಡುವವರ ಪ್ರಮಾಣ.

ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಪಾಸಿಟಿವ್‌ ದರವು ಶೇ 34.7ರಷ್ಟು ಇದೆ.

ದೇಶದ ಒಟ್ಟು 533 ಜಿಲ್ಲೆಗಳಲ್ಲಿ ಕೋವಿಡ್‌ ಪಾಸಿಟಿವ್‌ ದರವು ಶೇ 10ಕ್ಕಿಂತ ಹೆಚ್ಚು ಇದೆ. ಇವುಗಳಲ್ಲಿ  ಮಧ್ಯ ಪ‍್ರದೇಶದ 45 ಮತ್ತು ಮಹಾರಾಷ್ಟ್ರದ 36 ಜಿಲ್ಲೆಗಳು ಸೇರಿವೆ. 

ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿ, ಅಗೋಚರವಾಗಿರುವ ಸೋಂಕುಗಳನ್ನು ಕೂಡ ಪತ್ತೆ ಮಾಡಬೇಕು. ಅದಕ್ಕಾಗಿ ನಗರಗಳು, ಪಟ್ಟಣಗಳು, ಗ್ರಾಮಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಎಲ್ಲ ಆಸ್ಪತ್ರೆಗಳಲ್ಲಿಯೂ ಪರೀಕ್ಷಾ ಸೌಲಭ್ಯ ಒದಗಿಸಬೇಕು. ಪರೀಕ್ಷಾ ಸೌಲಭ್ಯ ಒದಗಿಸಲು ಮಾನ್ಯತೆಯ ಅಗತ್ಯ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ಹೇಳಿದೆ. 

ಪ್ರತಿ ದಿನ 16 ಲಕ್ಷ ಆರ್‌ಟಿಪಿಸಿಆರ್‌ ಮತ್ತು 17 ಲಕ್ಷ ಆರ್‌ಎಟಿ ಪರೀಕ್ಷೆ ನಡೆಸುವ ಸಾಮರ್ಥ್ಯ ದೇಶಕ್ಕೆ ಇದೆ ಎಂದು ಐಸಿಎಂಆರ್‌ ಪ್ರಧಾನ ನಿರ್ದೇಶಕ ಬಲರಾಂ ಭಾರ್ಗವ ಹೇಳಿದ್ದಾರೆ. ದಿನಕ್ಕೆ 33 ಲಕ್ಷ ಪರೀಕ್ಷೆಯ ಸಾಮರ್ಥ್ಯ ಇದ್ದರೂ ಒಂದು ದಿನವೂ ಪರೀಕ್ಷೆಯ ಸಂಖ್ಯೆ 20 ಲಕ್ಷ ದಾಟದಿರಲು ಕಾರಣವೇನು ಎಂಬುದನ್ನು ಅವರು ತಿಳಿಸಿಲ್ಲ. 

ವಿವಿಧ ರಾಜ್ಯಗಳಲ್ಲಿ ಸೋಂಕು ದೃಢಪಡುವ ಸಂಖ್ಯೆ ಹೆಚ್ಚಿದಂತೆ ಪರೀಕ್ಷೆಗಳ ಸಂಖ್ಯೆಯಲ್ಲಿ ಕಡಿಮೆ ಯಾಗಿದೆ. ಹೀಗಾದರೆ ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ಸೋಂಕು ಅಗೋಚರವಾಗಿ ಉಳಿದು, ಹರಡುವಿಕೆ ಹೆಚ್ಚಬಹುದು ಎಂಬ ಆತಂಕವನ್ನು ಪರಿಣತರು ವ್ಯಕ್ತಪಡಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು