ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ -19: ಎಂಟು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದ ರಾಜಸ್ಥಾನ ಸರ್ಕಾರ

Last Updated 22 ನವೆಂಬರ್ 2020, 8:00 IST
ಅಕ್ಷರ ಗಾತ್ರ

ಜೈಪುರ: ಕೋವಿಡ್-19 ಹರಡುವಿಕೆಯು ಜಾಸ್ತಿಯಾಗುತ್ತಿರುವುದರಿಂದ ರಾಜಸ್ಥಾನ ಸರ್ಕಾರ ಜೈಪುರ, ಜೋಧ್‌ಪುರ, ಕೋಟಾ, ಬಿಕನೇರ್, ಉದಯಪುರ, ಅಜ್ಮೀರ್, ಅಲ್ವಾರ್ ಮತ್ತು ಭಿಲ್ವಾರಾ ಎಂಬ ಎಂಟು ಜಿಲ್ಲೆಗಳಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿದೆ.

ಕ್ಯಾಬಿನೆಟ್ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.

ಕೋವಿಡ್‌ನಿಂದ ಹೆಚ್ಚಿನ ತೊಂದರೆಗೆ ಒಳಗಾದ ಎಂಟು ನಗರಗಳಲ್ಲಿ (ಜೈಪುರ, ಜೋಧ್‌ಪುರ, ಕೋಟಾ, ಬಿಕನೇರ್, ಉದಯಪುರ, ಅಜ್ಮೀರ್, ಅಲ್ವಾರ್ ಮತ್ತು ಭಿಲ್ವಾರಾ) ರಾತ್ರಿ ಕರ್ಫ್ಯೂ ಹೇರುವುದು ಸೇರಿದಂತೆ ಕೊರೊನಾ ಸೋಂಕನ್ನು ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಲು ಸಚಿವ ಸಂಪುಟದ ಸಭೆ ಸೇರಿತು. ಸಭೆಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ' ಎಂದು ಗೆಹ್ಲೋಟ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ರಾತ್ರಿ ಕರ್ಫ್ಯೂ ಸಮಯದಲ್ಲಿ, ವಿವಾಹ ಸಮಾರಂಭಕ್ಕೆ ಹೋಗುವವರಿಗೆ, ಔಷಧಿಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಜನರಿಗೆ ಮತ್ತು ಬಸ್, ರೈಲು ಮತ್ತು ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಗೆಹ್ಲೋಟ್ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿಯ (ಸಿಎಂಒ) ಅಧಿಕೃತ ಮಾಹಿತಿ ಪ್ರಕಾರ, ನವೆಂಬರ್‌ನಲ್ಲಿ ಹೊಸ ಕೋವಿಡ್-19 ಪ್ರಕರಣಗಳ ದೈನಂದಿನ ಸಂಖ್ಯೆ 1,700 ರಿಂದ 3,000ಕ್ಕೆ ಏರಿಕೆಯಾಗಿದೆ.

'ಕರ್ಫ್ಯೂ ವಿಧಿಸಿರುವ ಎಂಟು ಜಿಲ್ಲೆಗಳಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಆಘಾತಕಾರಿಯಾಗಿ ಹೆಚ್ಚಾಗಿದೆ. ಚಳಿಗಾಲದ ದೃಷ್ಟಿಯಿಂದಾಗಿ ಪರಿಸ್ಥಿತಿ ಗಂಭೀರವಾಗಲಿದೆ ಎಂಬುದನ್ನು ಅಂದಾಜಿಸಲಾಗಿದೆ. ಆದ್ದರಿಂದ ಜನರ ಪ್ರಾಣವನ್ನು ಕಾಪಾಡಲು ಸರ್ಕಾರ ಈ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ' ಎಂದು ಅದು ಹೇಳಿದೆ.
ಸಿಎಂಒ ಪ್ರಕಾರ, ಮುಖವಾಡಗಳನ್ನು ಧರಿಸದಿರುವ ದಂಡವನ್ನು ಹಿಂದಿನ ₹ 200 ಗಳಿಂದ ₹ 500ಕ್ಕೆ ಹೆಚ್ಚಿಸಲಾಗಿದೆ.

ಸೋಂಕಿತ ವ್ಯಕ್ತಿಯು ಇನ್ನೊಬ್ಬರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾಗ ಕೋವಿಡ್-19 ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಮರ್ಥ್ಯವನ್ನು ಹೊಂದಿದೆ. ವೈರಸ್ ಸೋಂಕಿತ ವ್ಯಕ್ತಿಯು ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಅಥವಾ ಮೂಗಿನಿಂದ ಹೊರಬರುವ ಸಣ್ಣ ದ್ರವ ಕಣಗಳಲ್ಲಿ ಸೋಂಕು ಹರಡಬಹುದು. ಅದರ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮಾಸ್ಕ್‌ಗಳು ಪ್ರಮುಖ ಪಾತ್ರವಹಿಸುತ್ತವೆ.

ರಾಜಸ್ಥಾನದಲ್ಲಿ ಶನಿವಾರ 3,007 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯು 2,40,676ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 16 ಜನರು ಮೃತಪಟ್ಟಿದ್ದು, 1,963 ಜನರು ಗುಣಮುಖರಾಗಿದ್ದಾರೆ. ಒಟ್ಟಾರೆ 2,07,224 ಜನರು ಗುಣಮುಖರಾಗಿದ್ದರೆ, 2,146 ಜನರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT