ಬುಧವಾರ, ಮಾರ್ಚ್ 3, 2021
18 °C

ಕೋವಿಡ್-19 ಲಸಿಕೆಯ ದಕ್ಷತೆ ಪ್ರಶ್ನಿಸಿದ ಮನೀಷ್ ತಿವಾರಿಗೆ ಹರ್ಷವರ್ಧನ್ ತಿರುಗೇಟು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರವ್ಯಾಪಿಯಾಗಿ ಆರಂಭಿಸಲಾಗಿರುವ ಕೋವಿಡ್-19 ಲಸಿಕೆ ವಿತರಣೆ ಅಭಿಯಾನದಲ್ಲಿ ಲಸಿಕೆಯ ದಕ್ಷತೆ, ಸುರಕ್ಷತೆ ಹಾಗೂ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್ ವಕ್ತಾರ ಹಾಗೂ ಸಂಸದ ಮನೀಷ್ ತಿವಾರಿ ವಿರುದ್ಧ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ವಾಗ್ದಾಳಿ ನಡೆಸಿದರು.

ಮನೀಷ್ ತಿವಾರಿ ಕೋವಿಡ್-19 ಲಸಿಕೆ ಬಗ್ಗೆ ಅಪನಂಬಿಕೆ ಹಾಗೂ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಗ್ಯ ಸಚಿವರು ಆರೋಪಿಸಿದರು. ಮನೀಷ್ ತಿವಾರಿ ಮತ್ತು ಕಾಂಗ್ರೆಸ್ ತಪ್ಪಾದ ವದಂತಿ ಹರಡುವುದರಲ್ಲಿ ಉತ್ಸುಕರಾಗಿದ್ದಾರೆ. ನಿಮ್ಮ ಕಣ್ಣುಗಳನ್ನು ತೆರೆಯಿರಿ, ಪ್ರಖ್ಯಾತ ವೈದ್ಯರು ಹಾಗೂ ಸರ್ಕಾರಿ ಕಾರ್ಯಕರ್ತರು ಚುಚ್ಚು ಮದ್ದು ಪಡೆಯುವ ಪೋಟೊಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.

ಮನೀಶ್ ತಿವಾರಿ ಅವರೇ, ಕೋವಿಡ್-19 ಹಿಂದಿರುವ ವಿಜ್ಞಾನವು ದೃಢನಿಶ್ಚಯದಿಂದ ಕೂಡಿದೆ. ಲಸಿಕೆ ಅಭಿವೃದ್ಧಿ ತ್ವರಿತಗೊಳಿಸಲು ನಮ್ಮ ವಿಜ್ಞಾನಿಗಳು ಮಿಂಚಿನ ವೇಗದಲ್ಲಿ ಕೆಲಸ ಮಾಡಿದ್ದಾರೆ. ಒಂದೇ ಒಂದು ಅಡೆತಡೆ ಎದುರಾಗಿಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಸುರಕ್ಷತೆಯೇ ಮಾರ್ಗದರ್ಶಕ ಸೂತ್ರವಾಗಿದೆ ಎಂದು ಹರ್ಷವರ್ಧನ್ ತಿಳಿಸಿದರು.

ಇದನ್ನೂ ಓದಿ: 

ಕೋವಿಡ್-19 ಲಸಿಕೆ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎತ್ತಿರುವ ಮನೀಷ್ ತಿವಾರಿ, ಸರ್ಕಾರಿ ಕಾರ್ಯಕರ್ತರು ಏಕೆ ಲಸಿಕೆ ಪಡೆಯುತ್ತಿಲ್ಲ ಎಂದು ಬೊಟ್ಟು ಮಾಡಿದ್ದರು.

ಲಸಿಕೆ ಸುರಕ್ಷಿತ ಹಾಗೂ ವಿಶ್ವಾಸಾರ್ಹವಾಗಿದ್ದರೆ, ದಕ್ಷತೆ ಹಾಗೂ ಪರಿಣಾಮಕಾರಿತ್ವವು ಪ್ರಶ್ನಾರ್ಹವಲ್ಲದಿದ್ದರೆ, ವಿಶ್ವದ ಇತರೆ ದೇಶಗಳಲ್ಲಿ ಸಂಭವಿಸಿದಂತೆ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರದ ಯಾವನೇ ಒಬ್ಬ ಕಾರ್ಯಕರ್ತನು ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದ್ದರು.

ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಜನವರಿ 16, ಶನಿವಾರದಂದು ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಆರೋಗ್ಯ ಹಾಗೂ ಮುಂಚೂಣಿಯ ಸೇನಾನಿಗಳು ಸೇರಿದಂತೆ 3 ಕೋಟಿ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು