ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ಹಾಕಿಸಿಕೊಂಡ ತಾಯಂದಿರ ಎದೆ ಹಾಲಿನಲ್ಲಿ ಪ್ರತಿಕಾಯಗಳು ಪತ್ತೆ

Last Updated 15 ನವೆಂಬರ್ 2021, 11:12 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ’ಕೋವಿಡ್‌ಗೆ ಒಳಗಾದ ಹಾಗೂ ಲಸಿಕೆ ಹಾಕಿಸಿಕೊಂಡ ತಾಯಂದಿರ ಎದೆಹಾಲಿನಲ್ಲಿ ಕೋವಿಡ್‌ ಪ್ರತಿಕಾಯ ಇರುವ ಅಂಶ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಪ್ರತಿಕಾಯ ಇದೆ ಎಂಬ ಕಾರಣಕ್ಕೆ ಇದೇ ಎದೆಹಾಲು ಕುಡಿಯುವ ಮಗುವಿಗೆ ಕೋವಿಡ್‌ನಿಂದ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗದು ಎಂದು ’ಜಾಮಾ ಪೆಡಿಯಾಟ್ರಿಕ್ಸ್‌’ ನಿಯತಕಾಲಿಕದಲ್ಲಿ ಪ್ರಕಟವಾದ ಈ ಅಧ್ಯಯನ ವರದಿ ಹೇಳಿದೆ.

ಸಂಶೋಧಕರು ಎದೆ ಹಾಲಿನಲ್ಲಿ ಪ್ರತಿಕಾಯಗಳ ಪ್ರಮಾಣವನ್ನು ಪತ್ತೆ ಮಾಡಲು, 77 ತಾಯಂದಿರ ಎದೆ ಹಾಲಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ 47 ಮಂದಿ ಕೋವಿಡ್ ಸೋಂಕಿತರು, ಇನ್ನು 30 ಮಂದಿ ಲಸಿಕೆ ಪಡೆದಿರುವ ತಾಯಂದಿರಿಂದ ಮಾದರಿ ಸಂಗ್ರಹಿಸಿದ್ದರು.

ರೋಗ-ಸ್ವಾಧೀನಪಡಿಸಿಕೊಂಡ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ತಾಯಂದಿರು ಎದೆ ಹಾಲಿನಲ್ಲಿ ವೈರಸ್ ವಿರುದ್ಧ ಹೆಚ್ಚಿನ ಮಟ್ಟದ ಇಮ್ಯುನೊಗ್ಲಾಬ್ಯುಲಿನ್ ಎ (ಐಜಿಎ) ಪ್ರತಿಕಾಯಗಳನ್ನು ಉತ್ಪಾದಿಸುತ್ತಾರೆ, ಲಸಿಕೆ ಹಾಕಿಸಿಕೊಂಡ ತಾಯಂದಿರ ಎದೆಹಾಲಿನಲ್ಲಿ ರೊಬೊಸ್ಟ್‌ ಇಮ್ಯುನೊಗ್ಲೋಬ್ಯುಲಿನ್ ಜಿ (ಐಜಿಜಿ) ಪ್ರತಿಕಾಯಗಳಿರುತ್ತವೆ.’ಎರಡೂ ಪ್ರತಿಕಾಯಗಳು ಸಾರ್ಸ್‌ ಕೋವ್ 2 ವೈರಸ್‌ ಅನ್ನು ನಿಷ್ಕ್ರಿಯಗೊಳಿಸುತ್ತವೆ‘ ಎಂದು ಸಂಶೋಧಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT