ಭಾನುವಾರ, ಆಗಸ್ಟ್ 14, 2022
20 °C

ಮಹಾರಾಷ್ಟ್ರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಶೇಕಡ 55ರಷ್ಟು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 3,659 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,781 ಪ್ರಕರಣಗಳು ವಾಣಿಜ್ಯ ನಗರಿ ಮುಂಬೈನಲ್ಲೇ ವರದಿಯಾಗಿವೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.

ಸೋಮವಾರ 2,354 ಪ್ರಕರಣ ದಾಖಲಾಗಿದ್ದವು. ಇಂದು ಶೇ.55ರಷ್ಟು ಹೆಚ್ಚಳ ಕಂಡುಬಂದಿದ್ದು, 1,305 ರಷ್ಟು ಹೆಚ್ಚು ಕೋವಿಡ್ ಪ್ರಕಣಗಳು ದೃಢಪಟ್ಟಿವೆ.

ಪುಣೆಯಲ್ಲಿ 454, ನಾಸಿಕ್‌ನಲ್ಲಿ 72, ನಾಗ್ಪುರದಲ್ಲಿ 69, ಅಕೊಲಾದಲ್ಲಿ 28, ಔರಂಗಾಬಾದ್‌ನಲ್ಲಿ 27 ಮತ್ತು ಲಾತೂರ್‌ನಲ್ಲಿ 26 ಪ್ರಕರಣಗಳು ವರದಿಯಾಗಿವೆ.

24 ಗಂಟೆಗಳಲ್ಲಿ 3,356 ಮಂದಿ ಗುಣಮುಖರಾಗಿದ್ದು,ಸಕ್ರಿಯ ಪ್ರಕರಣಗಳ ಸಂಖ್ಯೆ 24,915ರಷ್ಟಿದೆ. ಮುಂಬೈ ನಗರದಲ್ಲಿ 14,146 ಥಾಣೆಯಲ್ಲಿ 5,569 ಸಕ್ರಿಯ ಪ್ರಕರಣಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು