ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಐ(ಎಂ) ಮತ್ತು ಕಾಂಗ್ರೆಸ್ ಸೈದ್ಧಾಂತಿಕವಾಗಿ ಗೊಂದಲಕ್ಕೊಳಗಾಗಿವೆ: ಜೆಪಿ ನಡ್ಡಾ

Last Updated 27 ಮಾರ್ಚ್ 2021, 12:49 IST
ಅಕ್ಷರ ಗಾತ್ರ

ಚಕ್ಕರಕ್ಕಲ್ (ಕೇರಳ): ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಸಿಪಿಐ (ಎಂ) ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಎರಡೂ ಪಕ್ಷಗಳು ಕೇರಳದಲ್ಲಿ ಪರಸ್ಪರ ಜಗಳವಾಡುತ್ತಾ 'ಸೈದ್ಧಾಂತಿಕವಾಗಿ ಗೊಂದಲಕ್ಕೊಳಗಾಗಿದ್ದಾರೆ', ಆದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸಲು ಪಣತೊಟ್ಟು ಒಟ್ಟಾಗಿ ಹೋರಾಡುತ್ತಿವೆ ಎಂದು ದೂರಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈ ಸಮಯದಲ್ಲಿ ಎರಡೂ ಪಕ್ಷಗಳು ಎಷ್ಟು ಸೈದ್ಧಾಂತಿಕವಾಗಿ ಗೊಂದಲಕ್ಕೀಡಾಗಿವೆ. ಆದರೆ ಇಲ್ಲಿ ಕಾಂಗ್ರೆಸ್ ಮತ್ತು ಸಿಪಿಐ (ಎಂ) ಬಿಜೆಪಿಯನ್ನು ಸೋಲಿಸಲು ಪರಸ್ಪರ ಹೋರಾಡುತ್ತಿವೆ ಎಂದು ಪಕ್ಷದ ಅಭ್ಯರ್ಥಿ ಸಿ.ಕೆ. ಪದ್ಮನಾಭನ್ ಅವರ ಪರವಾಗಿ ರೋಡ್ ಶೋನಲ್ಲಿ ತಿಳಿಸಿದ್ದಾರೆ.

ಶಬರಿಮಲೆಗೆ ಮಹಿಳಾ ಪ್ರವೇಶ ವಿಷಯವನ್ನು ಉಲ್ಲೇಖಿಸಿದ ನಡ್ಡಾ, ಆಡಳಿತಾರೂಡ ಸಿಪಿಐ (ಎಂ) ಮತ್ತು ಮುಖ್ಯಮಂತ್ರಿಗಳು ಆಂದೋಲನವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ, ಆದರೆ ಕಾಂಗ್ರೆಸ್ ವರ್ಷಗಳಿಂದಲೂ ಕೇವಲ ಪೊಳ್ಳು ಭರವಸೆಗಳನ್ನು ಮಾತ್ರ ನೀಡಿದೆ.

ಎಲ್ಲಾ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪನ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ 2018ರ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದ ಬಳಿಕ ಒಂದು ಕಡೆಯ ಭಕ್ತರು ಮತ್ತು ಬಲಪಂಥೀಯ ಸಂಘಟನೆಗಳ ನೇತೃತ್ವದಲ್ಲಿ ನಡೆಸಿದ ಹಿಂಸಾತ್ಮಕ ಪ್ರತಿಭಟನೆಗೆ ರಾಜ್ಯ ಸಾಕ್ಷಿಯಾಗಿತ್ತು.
ದೇವಾಲಯದ ಸಂಪ್ರದಾಯದ ಪ್ರಕಾರ, 10-50 ವಯಸ್ಸಿನ ಮಹಿಳೆಯರು ಅಯ್ಯಪ್ಪನ ದೇಗುಲಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಕಿಡಿಕಾರಿದ ನಡ್ಡಾ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಕಚೇರಿ ಭಾಗಿಯಾಗಿದೆ. ತನಿಖೆ ನಡೆಯುತ್ತಿದೆ. ಅವರು (ವಿಜಯನ್) ಕೇಂದ್ರದ ತನಿಖಾ ತಂಡಗಳಿಂದ ತನಿಖೆ ನಡೆಸುವಂತೆ ಕೇಳಿದರು. ಆದರೆ ತನಿಖಾ ತಂಡಗಳು ಅವರ ಕಚೇರಿಗೆ ತಲುಪಿದಾಗ, ಕೇಂದ್ರವು ರಾಜ್ಯ ಸರ್ಕಾರದ ಮೇಲೆ ದಾಳಿ ನಡೆಸುತ್ತಿದೆ ಎಂದು ಅವರು ಹೇಳುತ್ತಿದ್ದಾರೆ ಎಂದು ದೂರಿದರು.

ಮೂರು ತನಿಖಾ ತಂಡಗಳಾದ ಜಾರಿ ನಿರ್ದೇಶನಾಲಯ, ಕಸ್ಟಮ್ಸ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದರಲ್ಲಿ ಜುಲೈ 2020 ರಲ್ಲಿ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಬ್ಯಾಗೇಜುಗಳಿಂದ 14.82 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT