ನವದೆಹಲಿ: ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯು ನ್ಯೂಯಾರ್ಕ್, ಲಂಡನ್ ಮತ್ತು ಶಾಂಘೈಗಳಂತಹ ಮಹಾನಗರಗಳನ್ನು ಹಿಂದಿಕ್ಕಿದೆ.

ಈ ಕುರಿತು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಪ್ರತಿ ಚದರ ಮೈಲಿಗೆ ಅತಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪತ್ರಕರ್ತರ ವಿರುದ್ಧ ಆರೋಪ: ಇಡಿಯಿಂದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

'ಫೋರ್ಬ್ಸ್ ಇಂಡಿಯಾ' ವರದಿಯ ಪ್ರಕಾರ, ಇಡೀ ವಿಶ್ವದಲ್ಲೇ ಪ್ರತಿ ಚದರ ಮೈಲಿಗೆ 1,826.6 ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿರುವ ದೆಹಲಿ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಲಂಡನ್ ಪ್ರತಿ ಚದರ ಮೈಲಿಗೆ 1,138 ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, ಪ್ರತಿ ಚದರ ಮೈಲಿಗೆ ಅತಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ನಗರಗಳ ಪೈಕಿ ದೆಹಲಿಯು ಶಾಂಘೈ, ನ್ಯೂಯಾರ್ಕ್ ಹಾಗೂ ಲಂಡನ್‌ಗಳಂತಹ ಮಹಾ ನಗರಗಳನ್ನು ಹಿಂದಿಕ್ಕಿರುವ ಬಗ್ಗೆ ಹೆಮ್ಮೆಯಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಈ ಮೈಲಿಗಲ್ಲು ಸಾಧಿಸಲು ನೆರವಾದ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳಿಗೆ ನಾನು ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದಿದ್ದಾರೆ.

609.9 ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಚೆನ್ನೈ ಮೂರು ಮತ್ತು 157.4 ಸಿಸಿಟಿವಿ ಕ್ಯಾಮರೆಗಳೊಂದಿಗೆ ಮುಂಬೈ 18ನೇ ಸ್ಥಾನ ಪಡೆದಿದೆ.

ದೆಹಲಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಆಳವಡಿಸುತ್ತಿದೆ. ಎರಡು ಹಂತಗಳಲ್ಲಿ ನಗರದಾದ್ಯಂತ ಸುಮಾರು 2.8 ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸಲು ಸರ್ಕಾರವು ಗುರಿ ಹೊಂದಿದೆ.

ಪಿಡಬ್ಲ್ಯುಡಿ ಅಧಿಕಾರಿಗಳ ಪ್ರಕಾರ, ಡಿಸೆಂಬರ್ 2019ರ ವೇಳೆಗೆ ನಗರದಲ್ಲಿ 1,05,000 ಸಿಸಿಟಿವಿ ಕ್ಯಾಮೆರಾಗಳನ್ನು ಆಳವಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.