ಸೋಮವಾರ, ಜೂನ್ 14, 2021
28 °C
ಮಕ್ಕಳ ಮೇಲೆ ಪರಿಣಾಮ

ಸಿಂಗಪುರದ ಹೊಸ ಕೊರೊನಾ ವೈರಸ್ ದೇಶದಲ್ಲಿ 3ನೇ ಅಲೆ ಎಬ್ಬಿಸಬಹುದು–ಕೇಜ್ರಿವಾಲ್

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಿಂಗಪುರದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ಹೊಸ ಮಾದರಿಯು ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದ್ದು, ಅಲ್ಲಿಂದ ಎಲ್ಲ ರೀತಿಯ ವಿಮಾನ ಸೇವೆಗಳನ್ನು ಕೂಡಲೇ ರದ್ದುಪಡಿಸುವಂತೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಹೊಸ ವೈರಸ್‌ ಮಾದರಿಯು ಭಾರತದಲ್ಲಿ ಮೂರನೇ ಅಲೆಯ ರೂಪದಲ್ಲಿ ವ್ಯಾಪಿಸಬಹುದಾಗಿದೆ ಎಂದು ಕೇಜ್ರಿವಾಲ್‌ ಟ್ವೀಟಿಸಿದ್ದಾರೆ.

'ಸಿಂಗಪುರದಲ್ಲಿ ಪತ್ತೆಯಾಗಿರುವ ಹೊಸ ಸ್ವರೂಪದ ಕೊರೊನಾ ವೈರಸ್‌ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಅದು ಮೂರನೇ ಅಲೆಯ ರೂಪದಲ್ಲಿ ದೆಹಲಿಯನ್ನು ಪ್ರವೇಶಿಸಬಹುದಾಗಿದೆ. ಕೇಂದ್ರ ಸರ್ಕಾರವನ್ನು ಕೇಳುವುದೇನೆಂದರೆ: 1. ಸಿಂಗಪುರದ ಜೊತೆಗಿನ ಎಲ್ಲ ವಿಮಾನ ಸೇವೆಗಳನ್ನು ಕೂಡಲೇ ರದ್ದುಪಡಿಸಿ. 2. ಮಕ್ಕಳಿಗೆ ಪರ್ಯಾಯವಾಗಿ ನೀಡಬಹುದಾದ ಲಸಿಕೆಗೆ ಸಂಬಂಧಿಸಿದ ಕಾರ್ಯವನ್ನು ಆದ್ಯತೆಯಾಗಿ ಪರಿಗಣಿಸಿ' ಎಂದು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ– ಮಕ್ಕಳಲ್ಲಿ ಸೋಂಕು ಹರಡುತ್ತಿದೆ ರೂಪಾಂತರಗೊಂಡ ಕೊರೊನಾ ವೈರಸ್‌: ಸಿಂಗಪುರ

ಮಂಗಳವಾರ 24 ಗಂಟೆಗಳ ಅಂತರದಲ್ಲಿ ದೆಹಲಿಯಲ್ಲಿ ಕೋವಿಡ್‌–19 ದೃಢಪಟ್ಟ 4,482 ಪ್ರಕರಣಗಳು ದಾಖಲಾಗಿವೆ ಹಾಗೂ 265 ಮಂದಿ ಸಾವಿಗೀಡಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು