ಮಹದಾಯಿ: ಕರ್ನಾಟಕದ ವರ್ತನೆ ದುರ್ಯೋಧನಂತಿದೆ ಎಂದ ಗೋವಾದ ಮಾಜಿ ಸಚಿವ

ಪಣಜಿ: ಮಹದಾಯಿ ನದಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ವರ್ತನೆಯು ಮಹಾಭಾರತದಲ್ಲಿನ ಧುರ್ಯೋಧನನಂತಿದೆ ಎಂದು ಗೋವಾದ ಮಾಜಿ ಸಚಿವ ಮತ್ತು ಬಿಜೆಪಿ ಪಕ್ಷದ ನಾಯಕ ದಯಾನಂದ ಮಾಂಡ್ರೇಕರ್ ಶುಕ್ರವಾರ ಹೇಳಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಶಾಸಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾಭಾರತದಲ್ಲಿ ಪಾಂಡವರಿಗೆ ಒಂದು ತುಂಡು ಭೂಮಿಯನ್ನು ನೀಡದೆ ಕಾಡಿದ, ಎಲ್ಲರಿಗೂ ಅವಮಾನ ಮಾಡುತ್ತಿದ್ದ ಧುರ್ಯೋಧನನಂತಿದೆ ಕರ್ನಾಟಕದ ವರ್ತನೆ ಎಂದರು.
2012 ರಿಂದ 2017ರವರೆಗೆ ಮನೋಹರ್ ಪರಿಕ್ಕರ್ ಅವರ ಸಚಿವ ಸಂಪುಟದಲ್ಲಿ ಮಾಂಡ್ರೇಕರ್ ಜಲಸಂಪನ್ಮೂಲ ಸಚಿವರಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.