ಬುಧವಾರ, ಡಿಸೆಂಬರ್ 8, 2021
18 °C

ರೈತರ ಹತ್ಯೆ: ಹಾನಿ ತಡೆಗೆ ಮೋದಿ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಿನಗರ/ಲಖನೌ: ಲಖಿಂಪುರ-ಖೇರಿಯಲ್ಲಿ ಕೇಂದ್ರ ಸಚಿವರ ಕಾರು ಹರಿಸಿ, ರೈತರ ಹತ್ಯೆಯ ಪರಿಣಾಮವು ಚುನಾವಣೆಯ ಮೇಲೆ ಆಗುವುದನ್ನು ತಡೆಯಲು ಮೋದಿ ಅವರು ಪ‍್ರಯತ್ನಿಸಿದ್ಧಾರೆ. ರೈತರಿಗಾಗಿ ಸರ್ಕಾರ ಏನೇನು ಮಾಡಿದೆ ಎಂಬ ಪಟ್ಟಿಯನ್ನು ಜನರ ಮುಂದೆ ಇಟ್ಟಿದ್ದಾರೆ

‘ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರ ಉತ್ಪನ್ನಗಳನ್ನು ಖರೀದಿಸುವಲ್ಲಿ ದಾಖಲೆ ನಿರ್ಮಿಸಿವೆ. ಕೃಷಿ ಉತ್ಪನ್ನಗಳ ಖರೀದಿ ಮೂಲಕ ಎರಡೂ ಸರ್ಕಾರಗಳು ಉತ್ತರ ಪ್ರದೇಶದ ರೈತರ ಖಾತೆಗಳಿಗೆ ಒಟ್ಟು ₹80,000 ಕೋಟಿ ಹಣ ವರ್ಗಾವಣೆ ಮಾಡಿವೆ. ಪಿಎಂ ಕಿಸಾನ್ ಸಮ್ಮಾನ್‌ ನಿಧಿ ಯೋಜನೆ ಅಡಿ ರಾಜ್ಯದ ರೈತರ ಬ್ಯಾಂಕ್ ಖಾತೆಗಳಿಗೆ ₹37,000 ಕೋಟಿಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಮೋದಿ ಅವರು ವಿವರಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಶೇ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಮೀಸಲಿರಿಸುವ ಕಾಂಗ್ರೆಸ್‌ನ ಘೋಷಣೆಗೂ ಪ್ರಧಾನಿ ಮೋದಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

‘ರಾಜ್ಯದಲ್ಲಿ ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರವು ಮಹತ್ವದ ಹೆಜ್ಜೆಗಳನ್ನು ಇರಿಸಿದೆ. ರಾಜ್ಯದಲ್ಲಿ ಈಚೆಗೆ ನೋಂದಣಿಯಾದ ಹೊಸ ಮನೆಗಳಲ್ಲಿ, ಬಹುಪಾಲು ಮನೆಗಳು ಮಹಿಳೆಯರ ಹೆಸರಿನಲ್ಲೇ ಇವೆ. ಬಡವರಿಗೆ ಪಕ್ಕಾ ಮನೆ, ಶೌಚಾಲಯ, ವಿದ್ಯುತ್ ಸಂಪರ್ಕ, ಎಲ್‌ಪಿಜಿ ಸಂಪರ್ಕ ದೊರೆತರೆ ಅವರ ಆತ್ಮವಿಶ್ವಾಸ ವೃದ್ಧಿಸುತ್ತದೆ. ಈ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು