ಶನಿವಾರ, ಡಿಸೆಂಬರ್ 3, 2022
27 °C

ಪಾಕಿಸ್ತಾನದಲ್ಲಿ ಪೊಲೀಸ್ ಶಿಬಿರದ ಮೇಲೆ ಡಕಾಯಿತರ ದಾಳಿ: ಐವರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರಾಚಿ: ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಪೊಲೀಸ್‌ ಶಿಬಿರವೊಂದರ ಮೇಲೆ ಶನಿವಾರ ದಾಳಿ ನಡೆಸಿದ 150 ಜನರಿದ್ದ ಡಕಾಯಿತರ ತಂಡ, ಡಿಎಸ್‌ಪಿ ಶ್ರೇಣಿಯ ಅಧಿಕಾರಿ ಸಹಿತ ಐವರು ಪೊಲೀಸರನ್ನು ಕೊಂದು ಹಾಕಿದೆ.

ಡಕಾಯಿತರು ಈಗಲೂ ಹಲವು ಪೊಲೀಸರನ್ನು ಒತ್ತೆಯಾಗಿ ಇರಿಸಿದ್ದು, ಅವರನ್ನು ಬಿಡಿಸಿಕೊಳ್ಳಲು ಮತ್ತು ಮೃತದೇಹಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದು ಘೋಟ್ಕಿ ವಲಯದ ಡಿಐಜಿ ಜಾವೇದ್ ಜಿಸ್ಕಾನಿ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಪೊಲೀಸ್ ಠಾಣೆ ಮತ್ತು ರಕ್ಷಣಾ ಪಡೆಗಳ ಮೇಲಿನ ದಾಳಿ ಸಾಮಾನ್ಯವಾಗಿದ್ದು, ಕಳೆದ ತಿಂಗಳು ಖೈಬರ್‌ ಪಂಖ್ತುಖ್ವಾ ಪ್ರಾಂತ್ಯದಲ್ಲಿ ಇದೇ ರೀತಿಯಲ್ಲಿ ದಾಳಿ ನಡೆದಿತ್ತು, ಆಗ ಇಬ್ಬರು ಪೊಲೀಸರು ಮೃತಪಟ್ಟಿದ್ದರು ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು