ರೂಪಾಯಿ ಕುರಿತ ನಿರ್ಮಲಾ ಹೇಳಿಕೆಯನ್ನು ಚಿದಂಬರಂ ಗೇಲಿ ಮಾಡಿದ್ದು ಹೀಗೆ...

ನವದೆಹಲಿ: ಭಾರತದ ರೂಪಾಯಿ ಕುಸಿಯುತ್ತಿಲ್ಲ, ಬದಲಾಗಿ ಅಮೆರಿಕ ಡಾಲರ್ ಮೌಲ್ಯವರ್ಧನೆಗೊಳ್ಳುತ್ತಿದೆ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯು ಈಗಾಗಲೇ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯಕ್ಕೀಡಾಗಿದೆ.
ಈಗ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರೂ ಸಚಿವೆ ನಿರ್ಮಲಾ ಅವರ ಹೇಳಿಕೆಯನ್ನು ತೀವ್ರ ಗೇಲಿ ಮಾಡಿದ್ದಾರೆ.
ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಅವರು, ‘ರೂಪಾಯಿ ದುರ್ಬಲವಾಗುತ್ತಿಲ್ಲ, ಆದರೆ ಡಾಲರ್ ಬಲಗೊಳ್ಳುತ್ತಿದೆ ಎಂದು ಹಣಕಾಸು ಸಚಿವರು ಹೇಳುತ್ತಾರೆ. ಅದು ಸಂಪೂರ್ಣವಾಗಿಯೂ ನಿಜ. ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಅಥವಾ ಪಕ್ಷ ಯಾವಾಗಲೂ ಹೇಳೋದು ಏನು ಗೊತ್ತೆ? ನಾವು ಚುನಾವಣೆಯಲ್ಲಿ ಸೋತಿಲ್ಲ ಆದರೆ ಇನ್ನೊಂದು ಪಕ್ಷ ಚುನಾವಣೆಯಲ್ಲಿ ಗೆದ್ದಿದೆ ಎನ್ನುತ್ತಾರೆ’ ಎಂದು ಚಿದಂಬರಂ ಕುಹಕವಾಡಿದ್ದಾರೆ.
FM said that the Rupee is not weakening but the Dollar is strengthening
Absolutely true!
A candidate or party that lost an election will always say: We did not lose the election but the other Party won the election
— P. Chidambaram (@PChidambaram_IN) October 17, 2022
ಭಾನುವಾರ ಮಾಧ್ಯಮಗೋಷ್ಠಿಯೊಂದರಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಅವರು, ‘ರೂಪಾಯಿ ಕುಸಿಯುತ್ತಿಲ್ಲ, ಬದಲಿಗೆ ಡಾಲರ್ ಬಲವರ್ಧನೆಗೊಳ್ಳುತ್ತಿದೆ’ ಎಂದು ಹೇಳಿದ್ದರು.
ಇದನ್ನೂ ಓದಿ: ರೂಪಾಯಿ ಕುಸಿಯುತ್ತಿಲ್ಲ: ಡಾಲರ್ ಮೌಲ್ಯ ವೃದ್ಧಿಸುತ್ತಿದೆ–ನಿರ್ಮಲಾ ಸೀತಾರಾಮನ್
ಅವರ ಹೇಳಿಕೆಯ ವಿಡಿಯೊ ತುಣುಕು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
"Rupee is not weakening, Dollor is strengthening"
~Nimo Tai pic.twitter.com/LlumRMiXAI— Nimo Tai 🇮🇳 (@Cryptic_Miind) October 16, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.