ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತರದ ಸ್ಥಳದಲ್ಲಿ ಕೆಲಸ ಮಾಡುವವರಿಗೆ ಭದ್ರತೆ; ದೆಹಲಿ IITಯಿಂದ ಸ್ಮಾರ್ಟ್ ಡಿವೈಸ್

Last Updated 23 ಫೆಬ್ರವರಿ 2023, 13:55 IST
ಅಕ್ಷರ ಗಾತ್ರ

ನವದೆಹಲಿ: ಎತ್ತರದ ಸ್ಥಳಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಯ ಮೇಲೆ ನಿಗಾ ಇಡುವ ಸ್ಮಾರ್ಟ್‌ ಮಾನಿಟರಿಂಗ್‌ ಸಿಸ್ಟಂ (ಎಸ್‌ಎಂಎಸ್‌) ಅನ್ನು ದೆಹಲಿಯ ಐಐಟಿ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಜಾಗತಿಕ ಮಟ್ಟದ ಪ್ರಮುಖ ಸುರಕ್ಷತಾ ಕಂಪನಿಗಳಲ್ಲಿ ಒಂದೆನಿಸಿರುವ ಕರಮ್ ಸೇಫ್ಟಿ ಪ್ರೈವೇಟ್‌ ಲಿಮಿಟೆಡ್‌ (ಕೆಎಸ್‌ಪಿಎಲ್‌) ಹಾಗೂ ದೆಹಲಿ ಐಐಟಿಯ ನಾವಿನ್ಯತೆ ಮತ್ತು ತಂತ್ರಜ್ಞಾನ ವರ್ಗಾವಣೆ ಪ್ರತಿಷ್ಠಾನ (ಎಫ್‌ಐಟಿಟಿ) ಈ ಸಂಬಂಧ ಒಪ್ಪಂದ ಮಾಡಿಕೊಂಡಿವೆ.

ಈ ಬಗ್ಗೆ ಮಾತನಾಡಿರುವ ದೆಹಲಿ ಐಐಟಿ ಪ್ರಾಧ್ಯಾಪಕ ಹುಸೇನ್‌ ಕಂಚಾವಾಲ, 'ಎತ್ತರ ಸ್ಥಳಗಳಿಂದ ಆಯ ತಪ್ಪಿ ಬೀಳುವುದು ಕೆಲಸ ಸ್ಥಳಗಳಲ್ಲಿ ಸಂಭವಿಸುವ ಗಂಭೀರ ಹಾಗೂ ಮಾರಣಾಂತಿಕ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಬಹುತೇಕ ಕೆಲಸಗಾರರು ಸುರಕ್ಷತಾ ಸಾಮಗ್ರಿಗಳನ್ನು ಧರಿಸಿರುತ್ತಾರೆ. ಆದರೆ, ಕೆಲಸ ಮುಗಿಸುವ ಆತುರದಲ್ಲಿ ಸರಿಯಾಗಿ ತೊಟ್ಟುಕೊಳ್ಳುವುದನ್ನು ಮರೆತಿರುತ್ತಾರೆ. ಇದರ ಮೇಲೆ ಎಸ್‌ಎಂಎಸ್‌ ನಿಗಾ ಇಡಲಿದೆ' ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT