ಶುಕ್ರವಾರ, ಸೆಪ್ಟೆಂಬರ್ 24, 2021
21 °C

ವೈದ್ಯಕೀಯ ಆಮ್ಲಜನಕ ವ್ಯರ್ಥ ತಡೆಗೆ ಐಐಟಿಯಿಂದ ಹೊಸ ಸಾಧನ ಅಭಿವೃದ್ಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ರೋಪರ್‌ನ ಸಂಶೋಧಕರೊಬ್ಬರು ರೋಗಿಯ ಚಿಕಿತ್ಸೆ ವೇಳೆ ವೈದ್ಯಕೀಯ ಆಮ್ಲಜನಕ ವ್ಯರ್ಥವಾಗುವುದನ್ನು ತಡೆಗಟ್ಟಿ, ಮಿತಬಳಕೆ ಸಾಧಿಸುವಂತಹ ಹೊಸ ಸಾಧನವೊಂದನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸಿದ್ದಾರೆ.

‘ಈ ಸಾಧನವು ಉಸಿರಾಡುವಾಗ ಮತ್ತು ಪ್ರಯಾಣದ ಸಮಯದಲ್ಲಿ ರೋಗಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಪೂರೈಸುತ್ತದೆ. ಆ ಸಮಯದಲ್ಲಿ ಆಮ್ಲಜನಕ ವ್ಯರ್ಥವಾಗುವುದನ್ನು ಇದು ತಡೆದು, ಉಳಿತಾಯ ಮಾಡಲಿದೆ’ ಎಂದು ಐಐಟಿ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

‘ಕೋವಿಡ್‌ 19 ಎರಡನೇ ಅಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆಯು ಹಲವು ಪಟ್ಟು ಹೆಚ್ಚಾಗಿದೆ. ವೈದ್ಯಕೀಯ ಆಮ್ಲಜನಕದ ಅನಗತ್ಯವಾಗಿ ವ್ಯರ್ಥವಾಗುವುದನ್ನು ತಡೆಯಲು ಈ ಹೊಸ ಸಾಧನವು ನೆರವಾಗಲಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಆಮ್ಲೆಕ್ಸ್‌ (AMLEX) ಎನ್ನುವುದು ಆಮ್ಲಜನಕ ಸಿಲಿಂಡರ್‌ಗಳಿಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಿದ ವ್ಯವಸ್ಥೆ. ಇದು ರೋಗಿಯ ಉಸಿರಾಡುವಿಕೆ ಮತ್ತು ಉಸಿರಾಡುವಿಕೆಯೊಂದಿಗೆ ಆಮ್ಲಜನಕದ ಹರಿವನ್ನೂ ಸಮತೋಲನದಲ್ಲಿಡುತ್ತದೆ. ಸಿಲಿಂಡರ್‌ನಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನೂ ಸಂರಕ್ಷಿಸಿಡುತ್ತದೆ’ ಎಂದು ಐಐಟಿ ರೋಪರ್‌ನ ಬಯೋಮೆಡಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಆಶಿಶ್ ಸಹಾನಿ ಹೇಳಿದ್ದಾರೆ.

ಈ ಸಾಧನವು ಬ್ಯಾಟರಿ ಮತ್ತು ವಿದ್ಯುತ್‌ ಎರಡರಲ್ಲೂ ಕಾರ್ಯನಿರ್ವಹಿಸಬಲ್ಲದು ಎಂದು ಐಐಟಿ ರೋಪರ್ ನಿರ್ದೇಶಕ ರಾಜೀವ್ ಅಹುಜಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು