ಬುಧವಾರ, ಡಿಸೆಂಬರ್ 2, 2020
17 °C

ಕೋರ್ಟ್ ಕಲಾಪಗಳ ನೇರ ಪ್ರಸಾರ: ಗುಜರಾತ್‌ನಲ್ಲಿ ಪ್ರಾಯೋಗಿಕ ಚಾಲನೆ

ಪ್ರಜಾವಾಣಿ `ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ಕಲಾಪಗಳ ನೇರ ಪ್ರಸಾರ ಪ್ರಕ್ರಿಯು ಇದೇ ಮೊದಲ ಬಾರಿಗೆ ಗುಜರಾತ್ ಹೈಕೋರ್ಟ್‌ನಲ್ಲಿ ಆರಂಭವಾಗಿದೆ. ನ್ಯಾಯಮೂರ್ತಿ ವಿಕ್ರಂ ನಾಥ್ ನೇತೃತ್ವದ ವಿಭಾಗೀಯ ಪೀಠವು, ಪ್ರಾಯೋಗಿಕವಾಗಿ ಕಲಾಪಗಳ ನೇರ ಪ್ರಸಾರವನ್ನು ಹೈಕೋರ್ಟ್‌ನ ಯೂಟ್ಯೂಬ್‌ ಚಾನಲ್‌ನಲ್ಲಿ ಆರಂಭಿಸಿತು.

ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಜೆ.ಪಿ.ಪರ್ದಿವಾಲಾ ಅವರಿದ್ದ ಪೀಠವು, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್), ವಿಶೇಷ ಮೇಲ್ಮನವಿಗಳಿಗೆ ಸಂಬಂಧಿತ ಪ್ರಕರಣಗಳ ವಿಚಾರಣೆಯನ್ನು ನಡೆಸಿತು.

ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಸಂಬಂಧಿಸಿದ ಹೇಳಿಕೆಯ ಅನುಸಾರ, ಲಭ್ಯವಿರುವ ಸಾಧ್ಯತೆ, ಅವಕಾಶಗಳನ್ನು ಆಧರಿಸಿ ವಿಭಾಗೀಯ ಪೀಠದಲ್ಲಿ ನೇರ ಪ್ರಸಾರ ಆರಂಭವಾಗಿದೆ. ಇದು, ಪ್ರಾಯೋಗಿಕವಾಗಿದೆ. ಹೈಕೋರ್ಟ್‌ ವೆಬ್‌ಸೈಟ್‌ನಲ್ಲಿ ಯೂಟ್ಯೂಬ್‌ ಲಿಂಕ್‌ ಲಭ್ಯವಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು