ತಮಿಳುನಾಡಿನ ಸರವಣ ಸೂಪರ್ ಮಾರ್ಕೆಟ್ ಮೇಲೆ ಐಟಿ ದಾಳಿ

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಮಿಳುನಾಡಿನ ಸರವಣ ಸೂಪರ್‌ಮಾರ್ಕೆಟ್ ಮಳಿಗೆ ಮೇಲೆ ದಾಳಿ ನಡೆಸಿದ್ದಾರೆ.
ಚೆನ್ನೈಯ ಎಂಟು ತಾಣಗಳ ಸಹಿತ ರಾಜ್ಯದ ವಿವಿಧೆಡೆ ಒಟ್ಟು 14 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸರವಣ ಸೂಪರ್‌ಮಾರ್ಕೆಟ್‌ನ ಮಳಿಗೆ ಚೆನ್ನೈ, ಮಧುರೈ ಮತ್ತು ಕೊಯಮತ್ತೂರು ಸಹಿತ ವಿವಿಧ ತಾಣಗಳಲ್ಲಿವೆ. ಐಟಿ ದಾಳಿಯಾಗಿರುವುದರಿಂದ ಗ್ರಾಹಕರಿಗೆ ಮಳಿಗೆಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು.
ತಮಿಳುನಾಡಿನಾದ್ಯಂತ ಸರವಣ ಸೂಪರ್‌ಮಾರ್ಕೆಟ್‌ನ ವಸ್ತ್ರ ಮಳಿಗೆ, ಪೀಠೋಪಕರಣ ಮತ್ತು ದಿನಬಳಕೆಯ ಸಾಮಾಗ್ರಿಗಳು ದೊರೆಯುವ ಮಳಿಗೆಗಳಿದ್ದು, ಜನಪ್ರಿಯತೆ ಗಳಿಸಿವೆ.
ವಿಜಯ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆ ಜ. 18ಕ್ಕೆ: ‘ಸುಪ್ರೀಂ’
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.