ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡೆಲ್ಟಾ ಪ್ಲಸ್‌’ ರೂಪಾಂತರಿತ ತಳಿ: ದೇಶದಲ್ಲಿ 40 ಪ್ರಕರಣ ದೃಢ

Last Updated 23 ಜೂನ್ 2021, 7:37 IST
ಅಕ್ಷರ ಗಾತ್ರ

ನವದೆಹಲಿ: ದೇಶ ಕೊರೊನಾ ಎರಡನೇ ಅಲೆಯಿಂದ ಚೇತರಿಸಿಕೊಳ್ಳುವುದಕ್ಕೂ ಮುನ್ನ, ಅದರ ಇನ್ನೊಂದು ರೂಪಾಂತರಿತ ತಳಿ ‘ಡೆಲ್ಟಾ ಪ್ಲಸ್‌’ ಹಲವೆಡೆ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.

ದೇಶದ ವಿವಿಧ ರಾಜ್ಯಗಳಲ್ಲಿ ಈ ಸೋಂಕಿನ 40 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್‌ ಮಾಡಿದೆ.

ಮೂಲಗಳ ಪ್ರಕಾರ, ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 6, ಕೇರಳದಲ್ಲಿ 3, ತಮಿಳುನಾಡಿನಲ್ಲಿ 3, ಕರ್ನಾಟಕದಲ್ಲಿ 2, ಪಂಜಾಬ್‌, ಆಂಧ್ರಪ್ರದೇಶ ಮತ್ತು ಜಮ್ಮು– ಕಾಶ್ಮೀರದಲ್ಲಿ ತಲಾ ಒಂದು ಪ್ರಕರಣ ಕಂಡುಬಂದಿದೆ.

‘ಡೆಲ್ಟಾ ಪ್ಲಸ್‌’ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶದಲ್ಲಿ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಮಂಗಳವಾರ ಎಚ್ಚರಿಕೆ ನೀಡಿತ್ತು.

‘ಡೆಲ್ಟಾ ಪ್ಲಸ್‌’ ತಳಿ ಭಾರತ ಸೇರಿದಂತೆ ಅಮೆರಿಕ, ಇಂಗ್ಲೆಂಡ್‌,ಪೋರ್ಚುಗಲ್, ಸ್ವಿಟ್ಜರ್ಲೆಂಡ್, ಜಪಾನ್, ಪೋಲೆಂಡ್, ರಷ್ಯಾ ಮತ್ತು ಚೀನಾದಲ್ಲಿ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT