ಗುರುವಾರ , ಜನವರಿ 28, 2021
23 °C

ಕೆನಡಾ ಹೈಕಮಿಷನರ್‌ಗೆ ಸಮನ್ಸ್‌: ಟ್ರುಡೊ ಹೇಳಿಕೆಗೆ ಪ್ರತಿಭಟನೆ ದಾಖಲಿಸಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ನೀಡಿದ್ದ ಹೇಳಿಕೆಗೆ ಕೆನಡಾದ ಹೈಕಮಿಷನರ್‌ ಅವರಿಗೆ ಶುಕ್ರವಾರ ಸಮನ್ಸ್‌ ನೀಡಿದ ಭಾರತ, ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಿತು.

‘ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪವನ್ನು ಒಪ್ಪಲಾಗದು. ಈ ಧೋರಣೆ ಮುಂದುವರಿದಿದ್ದೇ ಆದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂಬುದಾಗಿ ಕೆನಡಾ ಹೈಕಮಿಷನರ್‌ಗೆ ತಿಳಿಸಲಾಯಿತು’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದ ಜಸ್ಟಿನ್‌ ಟ್ರುಡೊ, ‘ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕನ್ನು ಕೆನಡಾ ಸಮರ್ಥಿಸುತ್ತದೆ’ ಎಂದು ಹೇಳಿದ್ದರಲ್ಲದೇ, ದೆಹಲಿಯಲ್ಲಿನ ಪರಿಸ್ಥಿತಿ ಕಳವಳಕಾರಿ ಎಂದಿದ್ದರು.

‘ಪ್ರಧಾನಿ ಟ್ರುಡೊ ಸೇರಿದಂತೆ ಕೆಲವು ಮುಖಂಡರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ನೀಡಿದ ಹೇಳಿಕೆಗಳು ಕೆನಡಾದಲ್ಲಿನ ಭಾರತದ ಹೈಕಮಿಷನ್, ಕಾನ್ಸುಲೇಟ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ಕೆಲವು ತೀವ್ರಗಾಮಿಗಳಿಗೆ ಉತ್ತೇಜನ ನೀಡಿತ್ತು’ ಎಂದೂ ಸಚಿವಾಲಯ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು