ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಲೀಗಿ‌ ಜಮಾತ್‌ನ 17 ಸದಸ್ಯರ ಬಿಡುಗಡೆಗೆ ಜಾರ್ಖಂಡ್‌ ಕೋರ್ಟ್‌ ಆದೇಶ

Last Updated 29 ಸೆಪ್ಟೆಂಬರ್ 2020, 10:29 IST
ಅಕ್ಷರ ಗಾತ್ರ

ರಾಂಚಿ: ಇಲ್ಲಿನಮಸೀದಿಯಲ್ಲಿ ಅಡಗಿದ್ದ ವೇಳೆ ಬಂಧನಕ್ಕೊಳಗಾಗಿ, ಮೂರು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದ, ತಬ್ಲೀಗಿಜಮಾತ್‌ ಸದಸ್ಯರಾದ 17 ಜನ ವಿದೇಶಿಯರನ್ನು ಬಿಡುಗಡೆ ಮಾಡುವಂತೆ ಜಾರ್ಖಂಡ್‌ ಕೋರ್ಟ್‌ ಆದೇಶಿಸಿದೆ.

ಈ 17 ಜನರು ಮೂರು ತಿಂಗಳು ಕಾಲ ನ್ಯಾಯಾಂಗ ಬಂಧನದಲ್ಲಿ ಇದ್ದರು. ಹೀಗಾಗಿ ಅವರು ತಮ್ಮ ದೇಶಗಳಿಗೆ ತೆರಳಲು ಇಲ್ಲಿನ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಫಾಯೀಮ್‌ ಕೀರ್ಮಾನಿ ಅನುಮತಿ ನೀಡಿದರು. ಅವರಿಗೆ ತಲಾ ₹ 2,200 ದಂಡವನ್ನೂ ಕೋರ್ಟ್‌ ವಿಧಿಸಿದೆ.

ಮಲೇಷ್ಯಾ, ಬ್ರಿಟನ್‌, ನೆದರ್ಲೆಂಡ್ಸ್‌, ಜಾಂಬಿಯಾ ಹಾಗೂ ಕೆರಿಬಿಯನ್‌ ದ್ವೀಪ ರಾಷ್ಟ್ರಗಳಿಂದ ಬಂದಿದ್ದ ಇವರು ದೆಹಲಿಯಲ್ಲಿ ನಡೆದ ಜಮಾತ್‌ನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕೊರೊನಾ ಸೋಂಕು ಪ್ರಸರಣ ನಿಯಂತ್ರಿಸುವ ಸಂಬಂಧ ಅಂತರರಾಜ್ಯ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ, ಇವರು ರಾಂಚಿಗೆ ತೆರಳಿ, ಅಲ್ಲಿನ ಮಸೀದಿಯಲ್ಲಿ ಅಡಗಿದ್ದರು ಎಂದು ಆರೋಪಿಸಲಾಗಿತ್ತು. ಮಾರ್ಚ್‌ 30ರಂದು ಬಂಧಿಸಲಾಗಿದ್ದ ಇವರಿಗೆ ಜುಲೈ 15ರಂದು ಕೋರ್ಟ್‌ ಜಾಮೀನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT