ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: 12 ಅಡಿ ಆಳದ ಬಾವಿಗೆ ಬಿದ್ದ ಆನೆಯ ರಕ್ಷಣೆ

Last Updated 16 ಜೂನ್ 2021, 12:01 IST
ಅಕ್ಷರ ಗಾತ್ರ

ಕೊಚ್ಚಿ: ಕೇರಳದ ಎರ್ನಾಕುಳಂ ಜಿಲ್ಲೆಯ ನೇರಿಯಮಂಗಳಂ ಅರಣ್ಯ ಮಿತಿಯಲ್ಲಿರುವ ಬುಡಕಟ್ಟು ಜನವಸತಿಯೊಂದರ ತೆರೆದ ಬಾವಿಗೆ ಬಿದ್ದಿದ್ದ ಆನೆಯನ್ನು ಬುಧವಾರದಂದು ರಕ್ಷಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ವಾಲರ ಅರಣ್ಯ ಕೇಂದ್ರದ ಪಿನವೂರ್‌ಕುಡಿ ಬುಡಕಟ್ಟು ಪ್ರದೇಶದಲ್ಲಿ ಇಂದು ಬೆಳಗ್ಗೆ (ಬುಧವಾರ) ಈ ಘಟನೆ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, 12 ಅಡಿ ಆಳದ ಬಾವಿಗೆ ಬಿದ್ದ ಹೆಣ್ಣಾನೆಯನ್ನು ಕಾರ್ಯಾಚರಣೆಯ ಬಳಿಕ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಜೆಸಿಬಿ ಬಳಸಿ ಬಾವಿಯ ಬದಿಯಲ್ಲಿ ಮಣ್ಣು ಕೊರೆಯುವ ಮೂಲಕ ಆನೆಗೆ ಹೊರ ಬರಲು ದಾರಿ ಮಾಡಿಕೊಡಲಾಯಿತು. ಸಾಕಷ್ಟು ಪ್ರಯತ್ನದ ಬಳಿಕ ಆನೆ ಹೊರಗೆ ಬರುವಲ್ಲಿ ಯಶಸ್ವಿಯಾಯಿತು.ಬಾವಿಯಿಂದ ಮೇಲೆ ಬಂದ ಆನೆಯು ಕಾಡಿನತ್ತ ಓಡಿ ಹೋಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಬ್ಬರ್ ತೋಟದಲ್ಲಿರುವ ಬಾವಿಗೆ ಮಂಗಳವಾರದಂದು ಆನೆ ಬಿದ್ದಿರಬಹುದುಎಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT