ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಕಾರ್ಮಿಕರ ಹತ್ಯೆಯ ಹೊಣೆ ಹೊತ್ತು ವಲಸಿಗರಿಗೆ ಎಚ್ಚರಿಕೆ ನೀಡಿದ ಉಗ್ರರು

Last Updated 18 ಅಕ್ಟೋಬರ್ 2021, 8:19 IST
ಅಕ್ಷರ ಗಾತ್ರ

ಶ್ರೀನಗರ:ಉಗ್ರ ಸಂಘಟನೆಲಷ್ಕರ್ ಎ ತಯಬಾ ಜೊತೆಗೆ ಸಂಪರ್ಕ ಹೊಂದಿರುವ ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ (ಯುಎಲ್‌ಎಫ್‌), ಕಾಶ್ಮೀರದಲ್ಲಿ ಬಿಹಾರ ಮೂಲದ ಕಾರ್ಮಿಕರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದೆ. ಅಷ್ಟಲ್ಲದೆ,ಕಣಿವೆ ರಾಜ್ಯದಲ್ಲಿರುವ ವಲಸೆ ಕಾರ್ಮಿಕರಿಗೆ ಎಚ್ಚರಿಕೆಯನ್ನೂ ನೀಡಿದೆ.

ಉಗ್ರರುದಕ್ಷಿಣ ಕಾಶ್ಮೀರದಕುಲ್ಗಾಂನಲ್ಲಿರುವ ಮನೆಯೊಂದಕ್ಕೆ ನುಗ್ಗಿ ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಬಿಹಾರ ಮೂಲದ ಇಬ್ಬರು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿದ್ದರು.‌

ಶನಿವಾರ ನಡೆದ ದಾಳಿವೇಳೆ ಉತ್ತರ ಪ್ರದೇಶ ಮತ್ತು ಬಿಹಾರದ ಇಬ್ಬರು ಕಾರ್ಮಿಕರುಸಾವಿಗೀಡಾಗಿದ್ದರು. ಸದ್ಯಯುಎಲ್‌ಎಫ್‌ ನೀಡಿರುವ ಎಚ್ಚರಿಕೆಯಿಂದಾಗಿಕಣಿವೆಯಲ್ಲಿಆತಂಕ ಹೆಚ್ಚಾಗಿದೆ.

ವಲಸೆ ಕಾರ್ಮಿಕರ ಮೇಲೆಕಾಶ್ಮೀರದಲ್ಲಿ ನಿರಂತರವಾಗಿ ದಾಳಿ ನಡೆಯುತ್ತಿದ್ದು, ಇದುವರೆಗೆ ಒಟ್ಟು11 ನಾಗರಿಕರು ಮೃತಪಟ್ಟಿದ್ದಾರೆ.

ಈ ವಿಚಾರವಾಗಿ ಕಳವಳ ವ್ಯಕ್ತಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ.

ನಿತೀಶ್‌ ಅವರುಮೃತಬಿಹಾರಿಗಳ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಪರಿಸ್ಥಿತಿ ಚೆನ್ನಾಗಿಲ್ಲ
ಹೆಚ್ಚಾಗುತ್ತಿರುವಉಗ್ರರ ದಾಳಿ ಪ್ರಕರಣಗಳಿಂದ ಆತಂಕಗೊಂಡಿರುವವಲಸೆ ಕಾರ್ಮಿಕರು, ತಮ್ಮ ರಾಜ್ಯಗಳಿಗೆ ವಾಪಸ್‌ ಆಗುತ್ತಿದ್ದಾರೆ.

ʼಇಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ನಾವು ಭಯಗೊಂಡಿದ್ದೇವೆ. ನಮ್ಮೊಂದಿಗೆ ಮಕ್ಕಳೂ ಇವೆ. ನಾವು ನಮ್ಮೂರಿಗೆ ವಾಪಸ್‌ ಆಗುತ್ತಿದ್ದೇವೆʼ ಎಂದು ರಾಜಸ್ಥಾನದ ವಲಸೆ ಕಾರ್ಮಿಕರೊಬ್ಬರು ಆತಂಕದಿಂದ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT