ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಉಗ್ರ ಕೃತ್ಯಗಳಿಗೆ ಸಂಚು: ಮೂವರು ಉಗ್ರರ ಬಂಧನ

Last Updated 31 ಆಗಸ್ಟ್ 2020, 10:50 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದಲ್ಲಿ ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಪುನಶ್ಚೇತನಕ್ಕೆ ಮತ್ತು ಉಗ್ರ ಕೃತ್ಯಗಳಿಗೆ ಹೂಡಿದ್ದ ಸಂಚನ್ನು ಬಯಲಿಗೆಳೆದಿರುವ ಪೊಲೀಸರು ಮೂವರು ಉಗ್ರರನ್ನು ಬಂಧಿಸಿದ್ದಾರೆ.

ಬಂಧಿತ ಉಗ್ರರು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯ ಐಎಸ್‌ಐನ ಮೊಹಮ್ಮದ್ ಖಾಸೀಂ ಜತೆ ಸಂಪರ್ಕದಲ್ಲಿದ್ದರು ಎಂದು ಜಮ್ಮು–ಕಾಶ್ಮೀರದ ರಿಯಾಸಿ ಎಸ್‌ಎಸ್‌ಪಿ ರಶ್ಮಿ ವಾಜಿರ್ ತಿಳಿಸಿದ್ದಾರೆ.

ಇವರನ್ನು ಒಳನುಸುಳುವಿಕೆ ಸಂದರ್ಭ ಉಗ್ರರಿಗೆ ನೆರವಾಗಲು ಐಎಸ್‌ಐ ಬಳಸಿಕೊಳ್ಳುತ್ತಿತ್ತು. ಈ ಪ್ರಕರಣದಲ್ಲಿ ಒಟ್ಟು 11 ಮಂದಿ ಮೇಲೆ ಅನುಮಾನವಿದೆ. ಇದರಲ್ಲಿ ಒಬ್ಬಾಕೆ ಮಹಿಳೆಯೂ ಸೇರಿದ್ದು, ಆಕೆ ಐಎಸ್‌ಐ ಮೊಹಮ್ಮದ್ ಖಾಸೀಂನನ್ನು ಪಾಕಿಸ್ತಾನದಲ್ಲಿ ಭೇಟಿಯಾಗಿದ್ದಳು. ಆತನಿಂದ ಹಣವನ್ನೂ ಪಡೆದಿದ್ದಳು ಎಂದು ವಾಜಿರ್ ಹೇಳಿದ್ದಾರೆ.

ಬಂಧಿತರಲ್ಲಿ ಸರ್ಕಾರಿ ಉದ್ಯೋಗಿ, ಕಾರ್ಮಿಕ ಮತ್ತು ಅಂಗಡಿ ಕೆಲಸಗಾರ ಸೇರಿದ್ದಾರೆ. ಅವರ ಬ್ಯಾಂಕ್‌ ಖಾತೆಗಳನ್ನೂ ಪರಿಶೀಲಿಸಲಾಗಿದ್ದು, ಬೇನಾಮಿ ವ್ಯವಹಾರ ನಡೆದಿರುವುದು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಮಂದಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT