ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ: ಉಚಿತ ನೀರು, ವಿದ್ಯುತ್ ಭರವಸೆ ನೀಡಿದ ಎಎಪಿ

Last Updated 3 ಜುಲೈ 2022, 10:49 IST
ಅಕ್ಷರ ಗಾತ್ರ

ಭೋಪಾಲ್‌:ಮಧ್ಯಪ್ರದೇಶದಲ್ಲಿಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೇರಿದರೆ ಉಚಿತ ವಿದ್ಯುತ್, ನೀರು ಮತ್ತು ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಭರವಸೆ ನಿಡಿದ್ದಾರೆ.

ಮಧ್ಯಪ್ರದೇಶದಲ್ಲಿ 413 ನಗರ ಸ್ಥಳೀಯ ಸಂಸ್ಥೆಗಳಿಗೆ ಜುಲೈ 6 ಹಾಗೂ 13ರಂದು ಎರಡು ಹಂತಗಳಲ್ಲಿಚುನಾವಣೆ ನಡೆಯಲಿದೆ.

ಸಿಂಗ್ರೌಲಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಶನಿವಾರ ಭಾಗವಹಿಸಿದ ಕೇಜ್ರಿವಾಲ್‌, 'ಕಾಂಗ್ರೆಸ್ ಹಾಗೂ ಬಿಜೆಪಿ ನಿಮ್ಮನ್ನು ಮೋಸಗೊಳಿಸಿವೆ. ನಮಗೆ ಒಂದು ಅವಕಾಶ ನೀಡಿ. ಉಚಿತ ವಿದ್ಯುತ್‌, ನೀರು ಹಾಗೂ ಆರೋಗ್ಯ ಸೇವೆ ದೊರೆಯುತ್ತಿರುವ ದೆಹಲಿಯಂತೆಯೇಸಿಂಗ್ರೌಲಿಯನ್ನೂ ಅಭಿವೃದ್ಧಿಪಡಿಸುತ್ತೇವೆ ಎಂದು ನಿಮಗೆ ಭರವಸೆ ನೀಡುತ್ತೇನೆ. ನಮ್ಮ ‍ಪಕ್ಷ ಮಾತ್ರವೇ ಇಂತಹ ಕಾರ್ಯ ಮಾಡಲಿದೆ' ಎಂದು ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿಯೂ ಆಗಿರುವ ಕೇಜ್ರಿವಾಲ್‌,'ನಗರಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡುತ್ತೇನೆ. ನಮಗೆ ಒಂದು ಅವಕಾಶ ನೀಡಿ. ಕೆಲಸ ಮಾಡದಿದ್ದರೆ, ನಮ್ಮನ್ನು ಹೊರಗಟ್ಟಿ. ನೀವು ಕಾಂಗ್ರೆಸ್‌ ಮತ್ತು ಬಿಜೆಪಿ ಆಡಳಿತವನ್ನು ನೋಡಿದ್ದೀರಿ. ಅವರು ಜನರಿಗಾಗಿ ಕೆಲಸ ಮಾಡಿಲ್ಲ. ಅವರು ಒಬ್ಬರಿಗೊಬ್ಬರು ಪರ್ಯಾಯವಾಗಿ ಐದು ವರ್ಷ ಅಧಿಕಾರ ಅನುಭವಿಸಿದ್ದಾರೆ' ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT