ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ 18ರಿಂದ 44ರ ವಯೋಮಾನದವರಿಗೆ ಮೇ 1ರಿಂದಲೇ ಲಸಿಕೆ ಸಿಗಲ್ಲ

Last Updated 28 ಏಪ್ರಿಲ್ 2021, 11:50 IST
ಅಕ್ಷರ ಗಾತ್ರ

ಮುಂಬೈ: 18ರಿಂದ 44ರ ವಯೋಮಾನದವರಿಗೆ ಕೋವಿಡ್–19 ಲಸಿಕೆ ನೀಡಿಕೆಯನ್ನು ಮೇ 1ರಿಂದಲೇ ಆರಂಭಿಸದಿರಲು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ನಿರ್ಧರಿಸಿದೆ.

ಲಸಿಕೆ ಪೂರೈಕೆ ಬಗ್ಗೆ ಅನುಮಾನ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, 18ರಿಂದ 44 ವರ್ಷದವರಿಗೆ ಲಸಿಕೆಯನ್ನು ಉಚಿತವಾಗಿ ನೀಡುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ. ಇದಕ್ಕೆ ಸರ್ಕಾರ ₹6,500 ಕೋಟಿ ವ್ಯಯಿಸಬೇಕಾಗಲಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಲಸಿಕೆ ನೀಡಿಕೆ, ಲಾಕ್‌ಡೌನ್ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಮುಂದುವರಿಯಲಿದೆ ಎಂದೂ ಸರ್ಕಾರ ತಿಳಿಸಿದೆ.

‘ನಮ್ಮಲ್ಲಿ ಸಾಕಷ್ಟು ಲಸಿಕೆ ದಾಸ್ತಾನು ಇಲ್ಲ. ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ ಸೃಷ್ಟಿಯಾಗುವುದು ಬೇಕಿಲ್ಲ. ಹೀಗಾಗಿ ಮೇ 1ರಿಂದಲೇ ನಾವು ಅಭಿಯಾನ ಆರಂಭಿಸುತ್ತಿಲ್ಲ. ಲಸಿಕೆ ಸಂಗ್ರಹ ಹೆಚ್ಚಿದ ಕೂಡಲೇ, ಆದಷ್ಟು ಬೇಗ ಲಸಿಕೆ ನೀಡಿಕೆ ಆರಂಭಿಸುತ್ತೇವೆ’ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ತಿಳಿಸಿದ್ದಾರೆ.

45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು 6 ತಿಂಗಳ ಗುರಿ ನಿಗದಿಪಡಿಸಲಾಗಿದೆ. ಇದಕ್ಕೆ ಯೋಜನೆ ರೂಪಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಸ್ಪುಟ್ನಿಕ್ ವಿ ಲಸಿಕೆ ತರಿಸಿಕೊಳ್ಳುವ ಬಗ್ಗೆಯೂ ಮುಖ್ಯಮಂತ್ರಿಗಳ ಕಚೇರಿ ಚಿಂತನೆ ನಡೆಸುತ್ತಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರದ ನೆರವು ಕೋರಲಿದ್ದೇವೆ ಎಂದೂ ಅವರು ಹೇಳಿದ್ದಾರೆ.

18ರಿಂದ 44 ವರ್ಷದವರಿಗೆ ಲಸಿಕೆ ನೀಡುವ ಅಭಿಯಾನವನ್ನು ಮೇ 1ರಿಂದ ಆರಂಭಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸಿತ್ತು. ಆದರೆ ಇದರಿಂದ ಉಂಟಾಗುವ ಭಾರಿ ಬೇಡಿಕೆ ನಿಭಾಯಿಸುವಲ್ಲಿ ಹಲವಾರು ರಾಜ್ಯಗಳು ತೊಂದರೆ ಎದುರಿಸುತ್ತಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT