ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ನಂತರ ಈಗ ಮಹಾರಾಷ್ಟ್ರದಲ್ಲಿ ಝೀಕಾ ಪತ್ತೆ 

Last Updated 1 ಆಗಸ್ಟ್ 2021, 2:10 IST
ಅಕ್ಷರ ಗಾತ್ರ

ಪುಣೆ: ಮಹಾರಾಷ್ಟ್ರದ ಮೊದಲ ಝೀಕಾ ವೈರಸ್‌ ಸೋಂಕು ಪ್ರಕರಣ ಪುಣೆಯ ಪುರಂದರ ತಾಲೂಕಿನಲ್ಲಿ ಶುಕ್ರವಾರ ಪತ್ತೆಯಾಗಿದೆ.

ಬೆಲ್ಸಾರ್‌ ಗ್ರಾಮದ 50 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಆಕೆ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮಹಿಳೆ ಮತ್ತು ಆಕೆಯ ಕುಟುಂಬಸ್ಥರಲ್ಲಿ ಈಗ ರೋಗದ ಯಾವ ಲಕ್ಷಣಗಳೂ ಇಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ. ಮಹಿಳೆಗೆ ಚಿಕೂನ್ ಗುನ್ಯಾ ಕೂಡ ಇತ್ತು ಎಂದು ಇಲಾಖೆ ಹೇಳಿದೆ.

ಸರ್ಕಾರಿ ವೈದ್ಯರ ತಂಡವು ಶನಿವಾರ ಬೆಲ್ಸಾರ್‌ ಗ್ರಾಮಕ್ಕೆ ಭೇಟಿ ನೀಡಿ ಸರಪಂಚರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರನ್ನು ಸಂಪರ್ಕಿಸಿ, ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಝೀಕಾ ಪತ್ತೆಯಾಗಿದೆ ಎಂದು ನಾಗರಿಕರು ಆತಂಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದೂ ಸರ್ಕಾರ ಹೇಳಿದೆ.

ಸೊಳ್ಳೆಯಿಂದ ಹರಡುವ ಈ ರೋಗವು ಕೇರಳದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಈಗ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ.

ಕೇರಳದಲ್ಲಿ ಶನಿವಾರ ಹೊಸದಾಗಿ ಇಬ್ಬರಿಗೆ ಸೋಂಕು ತಗುಲಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT