ಸೋಮವಾರ, ಮಾರ್ಚ್ 27, 2023
32 °C

ಗುಜರಾತ್‌: ಆಕಾಶದಿಂದ ಬಿದ್ದ ಲೋಹದ ಚೆಂಡು

ಪಿಟಿಐ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಅಹಮದಾಬಾದ್‌: ಗುಜರಾತ್‌ನ ಕೆಲ ಗ್ರಾಮಗಳಲ್ಲಿ ಆಕಾಶದಿಂದ ಗೋಲಾಕಾರದ ನಾಲ್ಕು ಲೋಹದ ಚೆಂಡುಗಳು‌ ಬಿದ್ದಿದ್ದು, ಇವು ಚೀನಾದ ರಾಕೆಟ್‌ನ ಇಂಧನ ಟ್ಯಾಂಕ್‌ನ ಅವಶೇಷಗಳಾಗಿರಬಹುದೆಂದು ಕೆಲವು ತಜ್ಞರು ಅಂದಾಜಿಸಿದ್ದಾರೆ. 

‘ಆನಂದ್‌ ಹಾಗೂ ನೆರೆಯ ಖೇಡಾ ಜಿಲ್ಲೆಗಳ ದಗ್ಜಿಪುರ, ಕಂಬೊಲಾಜ್‌, ರಾಮಪುರ ಹಾಗೂ ಭುಮೇಲಾ ಗ್ರಾಮದಲ್ಲಿ ತಲಾ 1.5 ಅಡಿ ಸುತ್ತಳತೆಯ ಟೊಳ್ಳಾದ ಲೋಹದ ಚೆಂಡುಗಳು ಮೇ 12 ರಿಂದ 13ರ ನಡುವೆ ಆಕಾಶದಿಂದ ಬಿದ್ದಿವೆ. ಇದರಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಸದ್ಯ, ಈ ಲೋಹದ ಚೆಂಡುಗಳು ಆನಂದ್‌ ಪೊಲೀಸ್‌ ಠಾಣೆಯ ವಶದಲ್ಲಿವೆ’ ಎಂದು ಆನಂದ್‌ ಜಿಲ್ಲೆಯ ಉಪ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಡಿ. ಜಡೇಜಾ ಅವರು ತಿಳಿಸಿದ್ದಾರೆ. 

‘ಈ ಲೋಹದ ಚೆಂಡುಗಳು ಉಪಗ್ರಹದ ಭಾಗವಾಗಿರಬಹುದೆಂದು ಪ್ರಾಥಮಿಕ ವಿಶ್ಲೇಷಣೆಯು ಹೇಳಿದೆ. ಹೆಚ್ಚಿನ ಪ‍ರಿಶೀಲನೆಗಾಗಿ ಅವುಗಳನ್ನು ಇಸ್ರೋ ಹಾಗೂ ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ’ ಎಂದು ಜಡೇಜಾ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು