ಬುಧವಾರ, ಡಿಸೆಂಬರ್ 8, 2021
18 °C

ರಾಜಸ್ಥಾನ: ಭಾರತೀಯ ವಾಯುಪಡೆಯ ಮಿಗ್–21 ವಿಮಾನ ಪತನ

ಪಿಟಿಐ Updated:

ಅಕ್ಷರ ಗಾತ್ರ : | |

ಬಾಡ್‌ಮೇರ್: ಭಾರತೀಯ ವಾಯುಪಡೆಯ ಮಿಗ್–21 ವಿಮಾನ ರಾಜಸ್ಥಾನದ ಬಾಡ್‌ಮೇರ್‌ನಲ್ಲಿ ಪತನಗೊಂಡಿದೆ. ಪೈಲಟ್ ಪಾರಾಗಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಈ ವರ್ಷ ಪತನಗೊಂಡ ನಾಲ್ಕನೇ ಮಿಗ್–21 ವಿಮಾನ ಇದಾಗಿದೆ.

ಸಂಜೆ 5.30ರ ಸುಮಾರಿಗೆ ಜನವಸತಿಯಿಲ್ಲದ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ಘಟನೆ ಬಗ್ಗೆ ವಾಯುಪಡೆಯು ತನಿಖೆಗೆ ಆದೇಶಿಸಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಭ್ ಶರ್ಮಾ ಹೇಳಿದ್ದಾರೆ.

ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಪ್ರಾಣ ಹಾನಿಯಾಗಿಲ್ಲ. ವಿಮಾನದ ಅವಶೇಷಗಳಿಗೆ ಬೆಂಕಿ ಹೊತ್ತಿಕೊಂಡಿತ್ತು’ ಎಂದು ಬಾಡ್‌ಮೇರ್ ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು