ಬುಧವಾರ, ಜುಲೈ 6, 2022
22 °C

ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯ: ಕೇಂದ್ರ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಕ್ಕಳನ್ನು ಮೋಟಾರ್‌ಸೈಕಲ್‌ನಲ್ಲಿ ಕರೆದುಕೊಂಡು ಹೋಗಬೇಕಾದರೆ ಅವರಿಗೆ ಹೆಲ್ಮೆಟ್‌ ಮತ್ತು ರಕ್ಷಾಕವಚವನ್ನು ಹಾಕುವುದನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ. ಒಂಬತ್ತು ತಿಂಗಳಿನಿಂದ ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ಮೋಟಾರ್‌ಸೈಕಲ್‌ನಲ್ಲಿ ಕರೆದೊಯ್ಯುವಾಗ ಈ ನಿಯಮ ಪಾಲಿಸುವುದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರ ಕಡ್ಡಾಯಗೊಳಿಸಿದೆ.

'ಕೇಂದ್ರದ ಮೋಟಾರು ವಾಹನಗಳು (ಎರಡನೇ ತಿದ್ದುಪಡಿ) ನಿಯಮಗಳು, 2022' ಪ್ರಕಟಗೊಂಡ ದಿನದಿಂದ ಒಂದು ವರ್ಷಕ್ಕೆ ಈ ನಿಯಮಗಳು ಜಾರಿಯಾಗಲಿವೆ.

'ಮೋಟಾರು ವಾಹನಗಳ ಕಾಯ್ದೆಯ ಸೆಕ್ಷನ್‌ 129ರ ಅಡಿಯಲ್ಲಿ ಈ ನಿಯಮದ ಅಧಿಸೂಚನೆ ಹೊರಡಿಸಲಾಗಿದೆ. ಅದರ ಪ್ರಕಾರ, ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮೋಟಾರ್‌ಸೈಕಲ್‌ನಲ್ಲಿ ಮಕ್ಕಳು ಪ್ರಯಾಣಿಸುವಾಗ ಅಥವಾ ಕರೆದೊಯ್ಯುವಾಗ ಹೆಲ್ಮೆಟ್‌, ರಕ್ಷಾಕವಚ ಕಡ್ಡಾಯವಾಗಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಎಲ್ಲ ಸುರಕ್ಷತಾ ಕ್ರಮಗಳ ಜೊತೆಗೆ ಮಕ್ಕಳನ್ನು ಕರೆದೊಯ್ಯುವಾಗ ಮೋಟಾರ್‌ಸೈಕಲ್‌ ವೇಗವು ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಸಾಗುವಂತಿಲ್ಲ.

ರಕ್ಷಾಕವಚವನ್ನು ಮಗುವಿಗೆ ಧರಿಸಿರಬೇಕು ಹಾಗೂ ಅದಕ್ಕೆ ಜೊತೆಯಾಗಿರುವ ಪಟ್ಟಿಯನ್ನು ವಾಹನ ಚಾಲನೆ ಮಾಡುವ ವ್ಯಕ್ತಿಯು ಭುಜದ ಮೇಲಿನಿಂದ ಧರಿಸಬೇಕು. ಈ ಮೂಲಕ ಮಗುವಿನ ತಲೆಯ ಕೆಳಗಿನ ದೇಹದ ಭಾಗವು ಸುರಕ್ಷಿತವಾಗಿ ಚಾಲಕನೊಂದಿಗೆ ಜೊತೆಯಾಗಿರಬೇಕು.

ಮಕ್ಕಳ ಸುರಕ್ಷತೆಗೆ ಬಳಸುವ ಹೆಲ್ಮೆಟ್‌, ಸುರಕ್ಷತಾ ಕವಚಗಳು ಹಗುರವಾಗಿರಬೇಕು, ಹೊಂದಿಸಿಕೊಳ್ಳುವಂತಿರಬೇಕು, ಜಲ ನಿರೋಧಕವಾಗಿರಬೇಕು ಹಾಗೂ ಬಾಳಿಕೆ ಬರುವಂತಿರಬೇಕು ಎಂದು ಸಚಿವಾಲಯವು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು