ಶುಕ್ರವಾರ, ಆಗಸ್ಟ್ 12, 2022
27 °C

ಆನ್‌ಲೈನ್‌ ರಮ್ಮಿ ನಿಷೇಧಿಸಿ: ಕೆ.ಸಿ.ರಾಮಮೂರ್ತಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಆನ್‌ಲೈನ್‌ ರಮ್ಮಿ ಆಡಿ ಹಣ ಕಳೆದುಕೊಂಡ ಯುವಜನತೆ ಅಪರಾಧ ಕೃತ್ಯಗಳಿಗೆ ಇಳಿಯುತ್ತಿದೆ. ಹೀಗಾಗಿ ಆನ್‌ಲೈನ್‌ ರಮ್ಮಿಯನ್ನು ನಿಷೇಧಿಸಬೇಕು’ ಎಂದು ರಾಜ್ಯಸಭೆಯ ಬಿಜೆಪಿಯ ಸದಸ್ಯ ಕೆ.ಸಿ.ರಾಮಮೂರ್ತಿ ಮಂಗಳವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದರು.

‘ಕ್ರಿಕೆಟ್‌ ತಾರೆ ಎಂ.ಎಸ್‌.ಧೋನಿ ಹಾಗೂ ಸಿನಿಮಾ ತಾರೆಯರು ಆನ್‌ಲೈನ್‌ ರಮ್ಮಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಆನ್‌ಲೈನ್‌ ರಮ್ಮಿ ಯಾವ ರೀತಿಯಲ್ಲಿ ಖ್ಯಾತಿಗಳಿಸುತ್ತಿದೆ ಎನ್ನುವುದನ್ನು ತೋರಿಸುತ್ತದೆ. ವಾಸ್ತವದಲ್ಲಿ ಇದೊಂದು ಜೂಜು ಹಾಗೂ ಬೆಟ್ಟಿಂಗ್‌ ಆಟ. ಹೆಚ್ಚು ಹಣಗಳಿಸಲೆಂದು ಇದನ್ನು ಆಟವಾಡುತ್ತಾ ಹಣ ಕಳೆದುಕೊಂಡವರೇ ಹೆಚ್ಚಾಗಿದ್ದು, ಹಲವು ಕುಟುಂಬಗಳನ್ನು ನಾಶ ಮಾಡಿದೆ’ ಎಂದರು. 

‘ಹಲವರಿಗೆ ಈ ಆಟ ಚಟವಾಗಿದೆ. ಸೆಳೆಯುವ ಜಾಹೀರಾತುಗಳ ಮುಖಾಂತರ ಯುವಜನತೆ ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರನ್ನು ಈ ಆಟ ಆಕರ್ಷಿಸುತ್ತಿದೆ. ಹಣವನ್ನು ಕಳೆದುಕೊಂಡ ಯುವಕರು, ಚಟವನ್ನು ಮುಂದುವರಿಸಲು ಅಪರಾಧ ಕೃತ್ಯಗಳಿಗೆ ಇಳಿಯುತ್ತಿದ್ದಾರೆ. ಆನ್‌ಲೈನ್‌ ರಿಯಲ್‌ ಮನಿಗೇಮಿಂಗ್‌ ಕ್ಷೇತ್ರವು ₹2,200 ಕೋಟಿ ಮೊತ್ತದ್ದಾಗಿದ್ದು, 2023ರ ವೇಳೆಗೆ ಇದು ₹12 ಸಾವಿರ ಕೋಟಿ ತಲುಪಲಿದೆ. ದೇಶದಲ್ಲಿ ಯಾವುದೇ ಕೈಗಾರಿಕೆಗಳು ಈ ವೇಗದಲ್ಲಿ ಬೆಳೆಯುತ್ತಿಲ್ಲ’ ಎಂದು ಕೆಪಿಎಂಜೆ ವರದಿ ಉಲ್ಲೇಖಿಸಿ ರಾಮಮೂರ್ತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು