ಶುಕ್ರವಾರ, ಅಕ್ಟೋಬರ್ 23, 2020
24 °C

ಮಾಸ್ಕ್‌ ಧರಿಸುವುದಿಲ್ಲ ಎಂದಿದ್ದ ಮಧ್ಯಪ್ರದೇಶದ ಸಚಿವನಿಂದ ಇಂದು ಕ್ಷಮೆ

ಎಎನ್‌ಐ‌ Updated:

ಅಕ್ಷರ ಗಾತ್ರ : | |

ಇಂದೋರ್‌: ನಾನು ಮಾಸ್ಕ್‌ ಧರಿಸುವುದಿಲ್ಲ ಎಂದು ಇಂದೋರ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದ ಮಧ್ಯಪ್ರದೇಶದ ಸಚಿವರೊಬ್ಬರು ಇಂದು ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ. 

ಬುಧವಾರ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಚಿವ ನರೋತ್ತಮ ಮಿಶ್ರಾ ಅವರು ಮಾಸ್ಕ್‌ ಧರಿಸದೇ ಬಂದಿದ್ದರು. ಈ ವೇಳೆ ಪತ್ರಕರ್ತರು ‘ನೀವು ಮಾಸ್ಕ್‌ ಧರಿಸುವುದಿಲ್ಲವೇ,’ ಎಂದು ಪ್ರಶ್ನಿಸಿದಾಗ 'ನಾನು ಮಾಸ್ಕ್‌ ಧರಿಸುವುದಿಲ್ಲ,' ಎಂದು ಹೇಳಿದ್ದರು. 

ತಮ್ಮ ಹೇಳಿಕೆ ಟೀಕೆಗೆ ಗುರಿಯಾಗುತ್ತಲೇ ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ನರೋತ್ತಮ ಮಿಶ್ರಾ, ‘ಮಾಸ್ಕ್‌ ಧರಿಸುವುದಿಲ್ಲ ಎಂಬ ನನ್ನ ಹೇಳಿಕೆಯು ಕಾನೂನು ಉಲ್ಲಂಘನೆಯಾಗಿದೆ. ಇದು ಪ್ರಧಾನಿ ಅವರ ಭಾವನೆಗಳಿಗೆ ವಿರುದ್ದವಾದದ್ದು. ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ಮತ್ತು, ಇದಕ್ಕಾಗಿ ಬೇಸರವಿದೆ. ನಾನು ಇನ್ನು ಮುಂದೆ ಮಾಸ್ಕ್‌ ಧರಿಸುತ್ತೇನೆ. ಇತರರೂ ಮಾಸ್ಕ್‌ ಧರಿಸಬೇಕು, ದೈಹಿಕ ಅಂತರ ಪಾಲಿಸಬೇಕು,' ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು