ಮಂಗಳವಾರ, ಮಾರ್ಚ್ 21, 2023
28 °C

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ: ಬಾಲಿವುಡ್ ತಾರೆಯರ ಸಮಾಗಮ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಅವರು ರಾಧಿಕಾ ಮರ್ಚೆಂಟ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡರು.

ರಾಧಿಕಾ ಮರ್ಚೆಂಟ್ ಉದ್ಯಮಿ ವಿರೇನ್ ಮರ್ಚೆಂಟ್ ಅವರ ಮಗಳು. ಅನಂತ್ ಮತ್ತು ರಾಧಿಕಾ ವಿವಾಹವಾಗಲಿದ್ದಾರೆ ಎಂದು 2019ರಲ್ಲಿ ಕುಟುಂಬದವರು ಘೋಷಿಸಿದ್ದರು. 

ಅನಂತ್ ಮತ್ತು ರಾಧಿಕಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಗುರುವಾರ ಮುಂಬೈನ ‘ಆಂಟಿಲಿಯಾ’ ನಿವಾಸದಲ್ಲಿ ನಡೆದಿದೆ. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಎರಡು ಕುಟುಂಬಗಳ ಸಂಪ್ರದಾಯದಂತೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ರಾಧಿಕಾ ಮರ್ಚೆಂಟ್ ಗೋಲ್ಡನ್ ಲೆಹೆಂಗಾ ಧರಿಸಿದ್ದರೆ, ಅನಂತ್ ಅಂಬಾನಿ ನೀಲಿ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಮದುವೆ ಯಾವಾಗ ಎಂಬುದನ್ನು ಕುಟುಂಬಗಳು ತಿಳಿಸಿಲ್ಲ.

2022ರ ಜೂನ್‌ನಲ್ಲಿ ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಸೆಂಟರ್‌ನಲ್ಲಿ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು, ರಾಧಿಕಾ ಅವರಿಗಾಗಿ ‘ಅರಾಂಜೇತ್ರಂ’ ಎನ್ನುವ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಮುಕೇಶ್‌ ಅಂಬಾನಿಯವರ ಕಿರಿಯ ಪುತ್ರನಾಗಿರುವ ಅನಂತ್‌, ಅಂಬಾನಿ ಒಡೆತನದ ಎನರ್ಜಿ ಉದ್ಯಮವನ್ನು ಮುನ್ನಡೆಸಲಿದ್ದಾರೆ. ಹೊಸ ಜೋಡಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. 

ಓದಿ... ಅಂಬಾನಿ ಪುತ್ರ ಅನಂತ್‌ರನ್ನು ವರಿಸುತ್ತಿರುವ ರಾಧಿಕಾ ಮರ್ಚೆಂಟ್‌ ಯಾರು?

ಬಾಲಿವುಡ್ ತಾರೆಯರ ಸಮಾಗಮ: ಅನಂತ್ ಮತ್ತು ರಾಧಿಕಾ ಅವರ ನಿಶ್ಚಿತಾರ್ಥದ ಅಂಗವಾಗಿ ಬಾಲಿವುಡ್‌ ಸೆಲೆಬ್ರೆಟಿಗಳಿಗಾಗಿ ಪಾರ್ಟಿ ಆಯೋಜಿಸಲಾಗಿತ್ತು. ನಿರ್ಮಾಪಕ ಕರಣ್ ಜೋಹರ್, ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಜಾನ್‌ ಅಬ್ರಹಾಂ, ವರುಣ್ ಧವನ್, ರಣವೀರ್ ಸಿಂಗ್ –ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಕತ್ರೀನಾ ಕೈಫ್, ಜಾಹ್ನವಿ ಕಪೂರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಮುಕೇಶ್‌ ಅಂಬಾನಿ ಕುಟುಂಬ


ರಣವೀರ್ ಸಿಂಗ್ –ದೀಪಿಕಾ ಪಡುಕೋಣೆ


ಮಗಳೊಂದಿಗೆ ಐಶ್ವರ್ಯಾ ರೈ


ಅಕ್ಷಯ್ ಕುಮಾರ್


ಕತ್ರೀನಾ ಕೈಫ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು