ಬುಧವಾರ, ಆಗಸ್ಟ್ 17, 2022
25 °C

ಮುಲಾಯಂ ಸಿಂಗ್ ಸೊಸೆ ಅಪರ್ಣಾ ಯಾದವ್‌ರಿಂದ ರಾಮ ಮಂದಿರಕ್ಕೆ ₹11 ಲಕ್ಷ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Mulayam singh yadavs daughter in law Aparna Yadav

ಲಖನೌ: ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್‌ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ₹11 ಲಕ್ಷ ದೇಣಿಗೆ ನೀಡಿದ್ದಾರೆ.

ನಾನಿದನ್ನು ಸ್ವ ಇಚ್ಛೆಯಿಂದ ನೀಡಿದ್ದೇನೆ. ನನ್ನ ಕುಟುಂಬ ಮಾಡಿದ್ದಕ್ಕೆ ನಾನು ಜವಾಬ್ದಾರಿಯಾಗಲಾರೆ. ಹಿಂದಿನದ್ದು ಎಂದಿಗೂ ಭವಿಷ್ಯಕ್ಕೆ ಸಮನಾಗಿರುವುದಿಲ್ಲ ಎಂದು ಅಪರ್ಣಾ ಹೇಳಿರುವುದಾಗಿ ‘ಎಎನ್‌ಐ’ ಟ್ವೀಟ್ ಮಾಡಿದೆ.

ಓದಿ: 

ಓದಿ: 

ರಾಮನಲ್ಲಿ ನಮಗೆ ನಂಬಿಕೆ ಹಾಗೂ ಗೌರವ ಇದೆ. ಹೀಗಾಗಿ ಸ್ವಯಂಪ್ರೇರಿತವಾಗಿ ನಾನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ₹11 ಲಕ್ಷ ದೇಣಿಗೆ ನೀಡಿದ್ದೇನೆ. ರಾಮ ಭಾರತದ ಗುಣಲಕ್ಷಣ, ಮೌಲ್ಯಗಳು ಹಾಗೂ ನಂಬಿಕೆಯ ಕೇಂದ್ರ ಬಿಂದು. ಪ್ರತಿಯೊಬ್ಬ ಭಾರತೀಯನೂ ದೇಣಿಗೆ ನೀಡಬೇಕು ಎಂದು ನಾನು ಭಾವಿಸುತ್ತೇನೆ. ನಾನೂ ದೇಣಿಗೆ ನೀಡಿದ್ದೇನೆ ಎಂದು ಅಪರ್ಣಾ ಹೇಳಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು