ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಧವ್‌ ವಿರುದ್ಧ ಕಂಗನಾ ಸಮರ

Last Updated 9 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮುಂಬೈ: ಮುಂಬೈನಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ಬಾಲಿವುಡ್‌ ನಟಿ ಕಂಗನಾ ರನೋತ್‌‌ ಬಂಗಲೆಯ ಅನಧಿಕೃತ ಎಂದು ಹೇಳಲಾದ ಭಾಗವನ್ನು ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸಿಬ್ಬಂದಿಬುಧವಾರ ನೆಲಸಮಗೊಳಿಸಿದ್ದಾರೆ.

ಬೃಹತ್‌ ಯಂತ್ರೋಪಕರಣಗಳೊಂದಿಗೆಬಂದ ಪಾಲಿಕೆಯ ಸಿಬ್ಬಂದಿ, ಕಂಗನಾ ಅವರ ಬಂಗಲೆಯಲ್ಲಿರುವ ‘ಮಣಿಕರ್ಣಿಕಾ ಫಿಲ್ಮ್ಸ್‌ ಪ್ರೈವೇಟ್‌ ಲಿಮಿಟೆಡ್’‌ ಕಚೇರಿಯ ಒಂದು ಭಾಗವನ್ನು ನೆಲಸಮಗೊಳಿಸಿದರು.

ವೈ ಪ್ಲಸ್ ಶ್ರೇಣಿಯ ಭದ್ರತೆಯಲ್ಲಿ ಹಿಮಾಚಲ ಪ್ರದೇಶದಿಂದ ಬುಧವಾರ ಮುಂಬೈಗೆ ಬಂದಿಳಿದ ಕಂಗನಾ, ಡಜನ್‌ಗೂ ಹೆಚ್ಚು ಸರಣಿ ಟ್ವೀಟ್‌ ಮತ್ತು ವಿಡಿಯೊಗಳ ಮೂಲಕ ಮಹಾರಾಷ್ಟ್ರ ಸರ್ಕಾರ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ ವಿರುದ್ಧ ಏಕ ವಚನದಲ್ಲಿ ಸಮರ ಸಾರಿದರು.

ಶಿವಸೇನಾ ಕಾರ್ಯಕರ್ತರ ಪ್ರತಿಭಟನೆಯ ನಡುವೆಯೇ ಕಂಗನಾ ಅವರಿಗೆ ಬೆಂಬಲ ಸೂಚಿಸಲು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ–ಎ) ಮತ್ತು ಕರ್ಣಿಸೇನಾ ಸಂಘಟನೆಯ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಸೇರಿದ್ದರು.

ಕಂಗನಾ ಕಿಡಿ

‘ಉದ್ಧವ್‌ ಠಾಕ್ರೆ, ನಿನ್ನನ್ನು ನೀನು ಏನೆಂದುಕೊಂಡಿರುವೆ? ನಿರ್ದೇಶಕ ಕರಣ್‌ ಜೋಹರ್‌ ನೇತೃತ್ವದ ಫಿಲ್ಮ್‌ ಮಾಫಿಯಾ ಜತೆ ಶಾಮೀಲಾಗಿ ನನ್ನ ಮನೆ ಧ್ವಂಸಗೊಳಿಸಿ, ಸೇಡು ತೀರಿಸಿಕೊಂಡೆಯಾ? ಇಂದು ನನ್ನ ಮನೆ ನೆಲಸಮವಾಗಿರಬಹುದು. ನಾಳೆ ನಿನ್ನ ಅಹಂಕಾರ ಅಳಿಯಲಿದೆ. ನಾನು ಸತ್ತರೂ ಜಗತ್ತಿಗೆ ನಿನ್ನ ಕರಾಳ ಮುಖವನ್ನು ತೋರಿಸದೆ ಬಿಡಲಾರೆ’ ಎಂದು ಕಂಗನಾ ಕಿಡಿ ಕಾರಿದ್ದಾರೆ.

***

ಕಂಗನಾ ನಂಬಿಕೆ ಉಳಿಸಿಕೊಳ್ಳಿ. ಈ ಹೋರಾಟದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ

–ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಸಂಸದ, ಟ್ವೀಟ್

ನಟಿ ಕಂಗನಾ ಮುಂಬೈಯಲ್ಲಿ ಇರುವ ತನಕ ಅವರಿಗೆ ನಮ್ಮ ಪಕ್ಷದ ಕಾರ್ಯಕರ್ತರು ರಕ್ಷಣೆ ನೀಡಲಿದ್ದಾರೆ

–ರಾಮದಾಸ್ ಅಠವಳೆ, ಕೇಂದ್ರ ಸಚಿವ ಮತ್ತು ಆರ್‌ಪಿಐ (ಎ) ನಾಯಕ

ಕಂಗನಾ ಹೇಳಿಕೆಗೆ ಅನಗತ್ಯ ಪ್ರಾಮುಖ್ಯತೆ ನೀಡಲಾಗುತ್ತಿದೆ.ಮುಂಬೈ ಪೊಲೀಸರ ಕಾರ್ಯದಕ್ಷತೆಯ ಬಗ್ಗೆ ಮಹಾರಾಷ್ಟ್ರದ ಜನರಿಗೆ ಅರಿವಿದೆ. ಮೂರನೆಯವರ ಮಾತಿಗೆ ಗಮನ ಹರಿಸುವ ಅಗತ್ಯವಿಲ್ಲ

–ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ

ಕಂಗನಾ ಅವರ ಬಂಗಲೆಯನ್ನು ನೆಲಸಮಗೊಳಿಸುವುದು ಮಹಾರಾಷ್ಟ್ರ ಸರ್ಕಾರದ ಶಕ್ತಿ ಪ್ರದರ್ಶನವಾಗಿದೆ. ಬಾಂದ್ರಾ, ಖಾರ್ ಪ್ರದೇಶದಲ್ಲಿ ಪರಿಶೋಧಿಸಿದರೆ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಅನಧಿಕೃತ ನಿರ್ಮಾಣ ಪ್ರದೇಶಗಳು ಸಿಗುತ್ತವೆ

–ನೌಜರ್ ಭರೂಚಾ, ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT