ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾಲ್ಯಾಂಡ್: 100 ವರ್ಷಗಳ ಬಳಿಕ ಎರಡನೇ ರೈಲು ನಿಲ್ದಾಣ ನಿರ್ಮಾಣ

Last Updated 26 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಚುಮುಕೆದಿಮಾ, ನಾಗಾಲ್ಯಾಂಡ್: ನೂರು ವರ್ಷಗಳ ನಂತರ ನಾಗಾಲ್ಯಾಂಡ್‌ನಲ್ಲಿ ಎರಡನೇ ರೈಲು ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಪ್ರಯಾಣಿಕರ ಬಳಕೆಗೆ ಶುಕ್ರವಾರ ಮುಕ್ತವಾಯಿತು.

ಈ ರೈಲು ನಿಲ್ದಾಣವನ್ನು ಶೋಖುವಿಯಲ್ಲಿ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ನೀಫು ರಿಯೊ ಅವರು ಶೋಖುವಿ ಈ ನಿಲ್ದಾಣದಲ್ಲಿ ದೋನಿಯಿ ಪೊಲೊ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಿದರು. ರಾಜ್ಯದ ಮೊದಲ ರೈಲು ನಿಲ್ದಾಣವನ್ನು ದಿಮಾಪುರದಲ್ಲಿ 1903ರಲ್ಲಿ ಉದ್ಘಾಟಿಸಲಾಗಿತ್ತು.

ದೋನಿಯಿ ಪೊಲೊ ಎಕ್ಸ್‌ಪ್ರೆಸ್‌ ನಿತ್ಯವೂ ಗುವಾಹಟಿಯಿಂದ ಅರುಣಾಚಲಪ್ರದೇಶದ ನಾಹರ್ಲಾಗುನ್ ನಡುವೆ ಸಂಚರಿಸುತ್ತದೆ. ಈಗ, ಈ ರೈಲಿನ ಸಂಚಾರವನ್ನು ನಾಗಾಲ್ಯಾಂಡ್‌ನ ಶೋಖುವಿ ವರೆಗೆ ವಿಸ್ತರಿಸಲಾಗಿದೆ. ಇದರೊಂದಿಗೆ ನಾಗಾಲ್ಯಾಂಡ್‌ ಹಾಗೂ ಅರುಣಾಚಲ ಪ್ರದೇಶ ನಡುವೆ ನೇರ ರೈಲು ಸಂಪರ್ಕ ಸಾಧ್ಯವಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT