ಗುರುವಾರ , ಮಾರ್ಚ್ 23, 2023
31 °C

ನೀರವ್ ಮೋದಿ ಸಹೋದರಿ ಖಾತೆಯಿಂದ ಭಾರತಕ್ಕೆ ₹ 17.25 ಕೋಟಿ ರವಾನೆ: ಇ.ಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಭಾರತದಿಂದ ಪಲಾಯನ ಮಾಡಿರುವ ಉದ್ಯಮಿ ನೀರವ್ ಮೋದಿ ಅವರ ಸಹೋದರಿ ಪೂರ್ವಿ ಮೋದಿ ಅವರು ತಮ್ಮ ಬ್ರಿಟನ್‌ನ ಬ್ಯಾಂಕ್ ಖಾತೆಯಿಂದ ₹ 17.25 ಕೋಟಿಯನ್ನು ಭಾರತ ಸರ್ಕಾರಕ್ಕೆ ರವಾನಿಸಿದ್ದಾರೆ’ ಎಂದು ಜಾರಿ ನಿರ್ದೇಶನಾಲಯವು ಗುರುವಾರ (ಇ.ಡಿ) ತಿಳಿಸಿದೆ.

ಪಿಎನ್‌ಬಿ ಸಾಲ ವಂಚನೆ ಪ್ರಕರಣದಲ್ಲಿ ಪೂರ್ವಿ ಅವರಿಗೆ ಸಹಾಯವನ್ನು ನೀಡುವ ಬದಲು ಕ್ರಿಮಿನಲ್ ಮೊಕದ್ದಮೆಗಳಿಂದ ಕ್ಷಮಿಸಲು ಅನುಮತಿ ನೀಡಲು ಭರವಸೆ ನೀಡಿದ ಬಳಿಕ ಈ ಹಣವನ್ನು ಭಾರತ ಸರ್ಕಾರಕ್ಕೆ ರವಾನಿಸಲಾಗಿದೆ ಎನ್ನಲಾಗಿದೆ.‌

‘ಲಂಡನ್‌ನ ಬ್ಯಾಂಕೊಂದರಲ್ಲಿ ತಮ್ಮ ಹೆಸರಿನ ಖಾತೆ ಇರುವುದು ತಮ್ಮ ಅರಿವಿಗೆ ಬಂದಿದ್ದು. ಅದನ್ನು ಸಹೋದರ ನೀರವ್ ಮೋದಿ ಅವರ ಆದೇಶದ ಮೇರೆಗೆ ತೆರೆಯಲಾಗಿತ್ತು. ಆದರೆ, ಅದರಲ್ಲಿರುವ ಹಣವು ತಮಗೆ ಸೇರಿದ್ದಲ್ಲ ಎಂದು ತಿಳಿದು ಬಂದಿದೆ ಎಂದು ಪೂರ್ವಿ ಮೋದಿ ಜೂನ್ 24ರಂದು ಇ.ಡಿ ಗಮನಕ್ಕೆ ತಂದಿದ್ದರು’ ಎಂದು ಇ.ಡಿ ಮಾಹಿತಿ ನೀಡಿದೆ.

‘ಪೂರ್ವಿ ಅವರ ಸಹಕಾರದಿಂದ ಇ.ಡಿ ಒಟ್ಟು ₹17.25 ಕೋಟಿಯನ್ನು ವಸೂಲಿ ಮಾಡಲು ಸಾಧ್ಯವಾಗಿದೆ’ ಎಂದೂ ಜಾರಿ ನಿರ್ದೇಶನಾಲಯವು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು