ಶುಕ್ರವಾರ, ನವೆಂಬರ್ 27, 2020
19 °C

ಬಿಹಾರ: ಏಳನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿತೀಶ್‌ ಕುಮಾರ್‌ ಪ್ರಮಾಣವಚನ

ಪಟ್ನಾ: ನಾಲ್ಕನೇ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ ಬಿಜೆಪಿಯ ಇಬ್ಬರು ಶಾಸಕರು ಉಪಮುಖ್ಯಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. 

ರಾಜಭವನದಲ್ಲಿ ಸೋಮವಾರ ಸಂಜೆ ನಡೆದ  ಸಮಾರಂಭದಲ್ಲಿ ನಿತೀಶ್‌ ಕುಮಾರ್‌ ಏಳನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗವರ್ನರ್ ಫಾಗೂ ಚೌಹಾಣ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಮುಖಂಡರು ಭಾಗಿಯಾದರು. 

2000ರಲ್ಲಿ ಮೊದಲ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ನಿತೀಶ್ ಕುಮಾರ್, ಎರಡು ದಶಕಗಳಲ್ಲಿ ಏಳು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

69 ವರ್ಷದ ನಿತೀಶ್ ಕುಮಾರ್ 2005ರ ನವೆಂಬರ್ನಿಂದ ನಿರಂತರವಾಗಿ ಬಿಹಾರ ಮುಖ್ಯಮಂತ್ರಿ ಚುಕ್ಕಾಣಿ ಹಿಡಿದಿದ್ದಾರೆ. ನಾಲ್ಕನೇ ಅವಧಿಗೆ ಅವರು ಅಧಿಕಾರ ವಹಿಸಿದಂತಾಗಿದೆ. 2014-15ರ ಅವಧಿಯಲ್ಲಿ ಜಿತಿನ್ ರಾಮ್ ಮಾಂಝಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದರು. 

ಬಿಜೆಪಿ ಶಾಸಕರಾದ ತಾರಕಿಶೋರ್‌ ಪ್ರಸಾದ್‌ ಮತ್ತು ರೇಣು ದೇವಿ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

ಜೆಡಿಯುನ ಐವರು, ಬಿಜೆಪಿಯ ಏಳು ಮಂದಿ ಹಾಗೂ ಎಚ್‌ಎಎಂ, ವಿಐಪಿಯ ತಲಾ ಒಬ್ಬರು ಸೇರಿ ಒಟ್ಟು 15 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರು:
* ವಿಜಯ್‌ ಕುಮಾರ್‌ ಚೌಧರಿ–ಜೆಡಿಯು
* ವಿಜೇಂದ್ರ ಪ್ರಸಾದ್‌ ಯಾದವ್–ಜೆಡಿಯು
* ಅಶೋಕ್‌ ಚೌಧರಿ–ಜೆಡಿಯು
* ಮೇವಾ ಲಾಲ್‌ ಚೌಧರಿ–ಜೆಡಿಯು
* ಸಂತೋಶ್‌ ಕುಮಾರ್‌ ಸುಮನ್‌ (ಹಿಂದುಸ್ತಾನಿ ಆವಾಂ ಮೋರ್ಚಾದ (ಎಚ್‌ಎಎಂ) ಮುಖ್ಯಸ್ಥ ಜಿತಿನ್‌ ರಾಮ್‌ ಮಾಂಝಿ ಅವರ ಪುತ್ರ)
* ಮುಕೇಶ್‌ ಸಾಹ್ನಿ– ವಿಐಪಿ (ವಿಕಾಸ್‌ಶೀಲ್‌ ಇನ್ಸಾನ್‌ ಪಾರ್ಟಿ)
* ಮಂಗಲ್‌ ಪಾಂಡೆ–ಬಿಜೆಪಿ
* ಅಮರಿಂದರ್‌ ಪ್ರತಾಪ್‌ ಸಿಂಗ್–ಬಿಜೆಪಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು