ನವದೆಹಲಿ: ‘ತಮಿಳುನಾಡು ರಾಜ್ಯವನ್ನು ವಿಭಜಿಸುವ ಯಾವುದೇ ಪ್ರಸ್ತಾವಕೇಂದ್ರ ಸರ್ಕಾರದ ಮುಂದಿಲ್ಲ’ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
ತಮಿಳುನಾಡು ಸಂಸದರಾದ ಟಿ.ಆರ್.ಪಾರಿವೆಂಧರ್ ಮತ್ತು ಎಸ್.ರಾಮಲಿಂಗಂ ಅವರ ಪ್ರಶ್ನೆಗೆ ಉತ್ತರಿಸಿದರು. ತಮಿಳುನಾಡು ವಿಭಜಿಸಿ ‘ಕೊಂಗುನಾಡು’ ಹೆಸರಿನಲ್ಲಿ ಹೊಸ ರಾಜ್ಯ ರಚಿಸಲಾಗುತ್ತದೆ ಎಂಬ ವದಂತಿಗಳಿದ್ದವು.
ಗೌಂಡರ್ ಸಮುದಾಯ ಪ್ರಾಬಲ್ಯ ಹೊಂದಿರುವ ನಮಕ್ಕಲ್, ಸೇಲಂ, ತಿರುಪ್ಪುರ್, ಕೊಯಮತ್ತೂರು ಒಳಗೊಂಡಂತೆ ಕೊಂಗುನಾಡು ರಾಜ್ಯ ಸ್ಥಾಪನೆಯಾಗಲಿದೆ ಎಂದೂ ಊಹಾಪೋಹಗಳಿದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.