ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ವರ್ಷಗಳಲ್ಲಿ 17 ಸಾವಿರ ಸರ್ಕ್ಯೂಟ್‌ ಕಿಮೀ ವಿದ್ಯುತ್‌ ಪ್ರಸರಣ ಮಾರ್ಗ ಸ್ಥಾಪನೆ

Last Updated 14 ಫೆಬ್ರವರಿ 2023, 14:34 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯುತ್‌ ಶಕ್ತಿ ಪೂರೈಕೆ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟನಲ್ಲಿ ಕಳೆದ 9 ವರ್ಷಗಳಲ್ಲಿ 17 ಸಾವಿರ ಸರ್ಕ್ಯೂಟ್‌ ಕಿಲೋಮೀಟರ್‌ನಷ್ಟು ಉದ್ದದ ಪ್ರಸರಣ ಮಾರ್ಗಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ವಿದ್ಯುತ್‌ ಸಚಿವ ಆರ್‌ ಕೆ ಸಿಂಗ್‌ ಮಂಗಳವಾರ ತಿಳಿಸಿದರು.

ಗ್ರಿಡ್‌ ಕಂಟ್ರೋಲರ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಗ್ರಿಡ್‌ –ಇಂಡಿಯಾ) ಮತ್ತು ಪಶ್ಚಿಮ ಆಫ್ರಿಕಾ ಪವರ್‌ ಪೂಲ್‌ ಸಂಸ್ಥೆ (ಡಬ್ಲ್ಯೂಎಪಿಪಿ) ಸಹಯೋಗದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರಿಯ ಸೌರ ಒಕ್ಕೂಟ ಕಾರ್ಯಕ್ರಮದಲ್ಲಿ ಪಶ್ಚಿಮ ಆಫ್ರಿಕಾದ ಪ್ರತಿನಿಧಿಗಳನ್ನುದ್ದೇಶಿಸಿ ಹೇಳಿದರು.

ಇದೇ ವೇಳೆ ಅವರು, 2014ರ ಬಳಿಕ 1,75,000 ಮೆಗಾವ್ಯಾಟ್‌ನಷ್ಟು ನವೀಕರಿಸಬಹುದಾದ ವಿದ್ಯುತ್‌ ‌ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ನವೀಕರಿಸಬಹುದಾದ ಶಕ್ತಿಗಳನ್ನು ಹೆಚ್ಚು ಬಳಕೆ ಮಾಡುವುದು ಶಕ್ತಿಯ ಮೂಲಗಳ ಸಾಂಪ್ರದಾಯಿಕ ರೂಪಕ್ಕಿಂತ ಕಡಿಮೆಯಾಗಲಿದೆ ಎಂದ ಅವರು, ಹಸಿರು ಶಕ್ತಿಯನ್ನೇ ಬಳಸುವಂತೆ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT