ಶನಿವಾರ, ಜುಲೈ 2, 2022
20 °C

ರಾಷ್ಟ್ರಧ್ವಜ ಹಾರಿಸಿ ಪಾಕಿಸ್ತಾನದ 18 ವರ್ಷದ ದಾಖಲೆ ಮುರಿದ 78 ಸಾವಿರ ಭಾರತೀಯರು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಭೋಜ್‌ಪುರ: ಬಿಹಾರದ ಭೋಜ್‌ಪುರದಲ್ಲಿ 78 ಸಾವಿರ ಮಂದಿ ಒಂದೇ ಬಾರಿಗೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಪಾಕಿಸ್ತಾನದ 18 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಶನಿವಾರ ಮುರಿದಿದ್ದಾರೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 78,000ಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ ರಾಷ್ಟ್ರಧ್ವಜವನ್ನು ಬೀಸಿದರು. ಈ ಘಟನೆಯು ಹೊಸ ದಾಖಲೆಗೆ ಸಾಕ್ಷಿಯಾಯಿತು. ಈ ಬಗ್ಗೆ ಮಾಧ್ಯಮ ಸಂಸ್ಥೆ ‘ಇಂಡಿಯಾ ಟುಡೆ’ ವರದಿ ಪ್ರಕಟಿಸಿದೆ.  

'ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವ'ದ ಅಂಗವಾಗಿ ಆಯೋಜಿಸಿದ್ದ, 1857ರ ಬ್ರಿಟಿಷರ ವಿರುದ್ಧದ ದಂಗೆಯ ವೀರರಲ್ಲಿ ಒಬ್ಬರಾದ ವೀರ್ ಕುಂವರ್‌ ಸಿಂಗ್ ಅವರ 164ನೇ ಪುಣ್ಯತಿಥಿಯಂದು ಭಾರತೀಯರು ಈ ದಾಖಲೆ ಬರೆದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಹಾರದ ಬಿಜೆಪಿಯ ಪ್ರಮುಖ ನಾಯಕರು, ಕೇಂದ್ರ ಸಚಿವರಾದ ಆರ್ ಕೆ ಸಿಂಗ್ ಮತ್ತು ನಿತ್ಯಾನಂದ ರೈ, ಉಪಮುಖ್ಯಮಂತ್ರಿಗಳಾದ ತಾರ್‌ಕಿಶೋರ್ ಪ್ರಸಾದ್‌, ರೇಣು ದೇವಿ, ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಅವರಿದ್ದ ಕಾರ್ಯಕ್ರಮದಲ್ಲಿ 'ವಂದೇ ಮಾತರಂ' ಗಾಯನದ ವೇಳೆ,  ಐದು ನಿಮಿಷಗಳ ಕಾಲ ತ್ರಿವರ್ಣ ಧ್ವಜವನ್ನು ಏಕಕಾಲದಲ್ಲಿ ಹಾರಿಸಲಾಯಿತು. 

ಅಮಿತ್ ಶಾ ಸಮ್ಮುಖದಲ್ಲಿ ಏಕಕಾಲಕ್ಕೆ 75,000 ತ್ರಿವರ್ಣ ಧ್ವಜ ಹಾರಿಸುವ ಗುರಿಯನ್ನು ಬಿಜೆಪಿ ಹೊಂದಿತ್ತು. 

2004ರಲ್ಲಿ ಲಾಹೋರ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ 56,000 ಪಾಕಿಸ್ತಾನಿಯರು ತಮ್ಮ ರಾಷ್ಟ್ರಧ್ವಜವನ್ನು ಬೀಸಿದ್ದು ಈ ಹಿಂದಿನ ವಿಶ್ವದಾಖಲೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು