ಭಾನುವಾರ, ಸೆಪ್ಟೆಂಬರ್ 19, 2021
23 °C

ಗಡಿ ನುಸುಳುವಿಕೆ: ಬಾಂಗ್ಲಾದಿಂದ 441, ಪಾಕ್‌ನಿಂದ 33 ಯತ್ನ, ಚೀನಾದಿಂದ ಒಂದೂ ಇಲ್ಲ

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

PTI

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳುವಿಕೆ ಯತ್ನವನ್ನುಈ ವರ್ಷ ಜೂನ್‌ವರೆಗೆ ಒಟ್ಟು 33 ಬಾರಿ ಪಾಕಿಸ್ತಾನ ನಡೆಸಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ.

ಗಡಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಅಜಯ್‌ ಭಟ್‌, ಭಾರತದ ಗಡಿ ನುಸುಳಲು ಯತ್ನಿಸಿದ ಪಾಕಿಸ್ತಾನದ 11 ಉಗ್ರರನ್ನು ಹತ್ಯೆ ಮಾಡಲಾಗಿದ್ದು, 20 ಉಗ್ರರನ್ನು ಸೆರೆ ಹಿಡಿಯಲಾಗಿದೆ. ಈ ವರ್ಷ ಚೀನಾದಿಂದ ಯಾವುದೇ ಗಡಿ ನುಸುಳುವಿಕೆ ಯತ್ನ ನಡೆದಿಲ್ಲ ಎಂದು ಉತ್ತರಿಸಿದರು.

ಭಾರತ ಮತ್ತು ಬಾಂಗ್ಲಾದೇಶದ ಗಡಿ ಕುರಿತು ಮಾತನಾಡಿದ ಅಜಯ್‌ ಭಟ್‌, ಈ ವರ್ಷ ಜೂನ್‌ ವರೆಗೆ ಬಾಂಗ್ಲಾದೇಶದಿಂದ ಒಟ್ಟು 441 ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ. ನೇಪಾಳ ಗಡಿಯಲ್ಲಿ 11 ಒಳನುಸುಳುಕೋರರನ್ನು ಬಂಧಿಸಲಾಗಿದೆ ಎಂದರು.

ಭಾರತ-ಮಾಯನ್ಮಾರ್‌ ಗಡಿಯಲ್ಲಿ, ಮಾಯನ್ಮಾರ್‌ನ 8,486 ನಾಗರಿಕರು ಮತ್ತು ನಿರಾಶ್ರಿತರು ಭಾರತಕ್ಕೆ ಬಂದಿದ್ದಾರೆ. ಈ ಪೈತಿ 5,796 ಮಂದಿಯನ್ನು ಗಡಿಯಿಂದ ವಾಪಸ್‌ ಕಳುಹಿಸಲಾಗಿದೆ. 2,690 ಮಂದಿ ಭಾರತದಲ್ಲೇ ಉಳಿದುಕೊಂಡಿದ್ದಾರೆ ಎಂದು ಅಜಯ್‌ ಭಟ್‌ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು