ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಮಾದಕ ದ್ರವ್ಯ ಸಾಗಣೆ: ಪಾಕ್‌ ಪ್ರಜೆ ಬಂಧನ

Last Updated 17 ಏಪ್ರಿಲ್ 2021, 14:53 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ನಲ್ಲಿ ಭಾರತ– ಪಾಕಿಸ್ತಾನದ ಗಡಿಯುದ್ದಕ್ಕೂ ಅಕ್ರಮವಾಗಿ ಮಾದಕವಸ್ತುಗಳನ್ನು ಸಾಗಣೆ ಮಾಡುತ್ತಿದ್ದ ಪಾಕಿಸ್ತಾನ ಮೂಲದ ಪ್ರಜೆಯನ್ನು ಮಾದಕ ದ್ರವ್ಯ ನಿಯಂತ್ರಣ ಘಟಕವು ಶನಿವಾರ ವಶಕ್ಕೆ ‍ಪಡೆದಿದೆ.

ಆರೋಪಿಯನ್ನು ಅಮ್ಜದ್‌ ಆಲಿ ಆಲಿಯಾಸ್‌ ಮಜೀದ್‌ ಜುಟ್‌ (28) ಎಂದು ಗುರುತಿಸಲಾಗಿದೆ. ಈತ ಲಾಹೋರ್‌ನ ಖರಕ್‌ ಗ್ರಾಮದವನು. ಏಪ್ರಿಲ್‌ 6,7ರಂದು ಬಿಎಸ್‌ಎಫ್‌ ಪಡೆಗಳು ಫಿರೋಜ್‌ಪುರ ಜಿಲ್ಲೆಯ ಖೇಮ್‌ಕರಣ್‌ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅಮ್ಜದ್‌ ಆಲಿ ಹಾಗೂ ಆತನ ಸಹಚರರು ಗಡಿ ಮೂಲಕ ಸುಮಾರು 20 ಕೆ.ಜಿಯಷ್ಟು ಹೆರಾಯಿನ್‌ನ್ನು ಭಾರತದ ತಮ್ಮ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗೆ ವರ್ಗಾಯಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳಿಂದ 20.5 ಕೆ.ಜಿ ಹೆರಾಯಿನ್‌, ಮೊಬೈಲ್‌ ಫೋನ್‌, ಪವರ್‌ ಬ್ಯಾಂಕ್‌ ಹಾಗೂ ಗಡಿಬೇಲಿ ಅಡಿಯಲ್ಲಿ ಡ್ರಗ್‌ ಪ್ಯಾಕೆಟ್‌ಗಳನ್ನು ಹಸ್ತಾಂತರಿಸಲು ಬಳಸುವ13 ಅಡಿ ಉದ್ದದ ಪಿವಿಸಿ ಪೈಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT