ಸೋಮವಾರ, ಜುಲೈ 4, 2022
21 °C

ದೇಶದ ಗಡಿಯನ್ನು ಪ್ರವೇಶಿದ ಪಾಕಿಸ್ತಾನದ ಪ್ರಜೆ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು: ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಶುಕ್ರವಾರ ದೇಶದ ಗಡಿಯನ್ನು ಪ್ರವೇಶಿದ ಪಾಕಿಸ್ತಾನದ ವ್ಯಕ್ತಿಯೊಬ್ಬರನ್ನು ಭಾರತೀಯ ಸೇನೆ ಬಂಧಿಸಿದೆ.

ಮಮೂದ್ ಅಲಿ (55) ಬಂಧಿತ ಪಾಕ್ ಪ್ರಜೆ.

‘ರಾಜೌರಿ ಜಿಲ್ಲೆಯ ತುರ್ಕುಂಡಿ ಪ್ರದೇಶದಲ್ಲಿ ಗಡಿಯನ್ನು ದಾಟಿದ ಪಾಕ್‌ ವ್ಯಕ್ತಿಯ ಅನುಮಾನಾಸ್ಪದ ಚಲನವಲನ ಗಮನಿಸಿದ ಭದ್ರತಾ ಪಡೆಗಳು ಆತನನ್ನು ಬಂಧಿಸಿವೆ. ಆರೋಪಿಯಿಂದ ಪಾಕಿಸ್ತಾನದ ನೋಟುಗಳು, ಕೊಡಲಿಯೊಂದನ್ನು ವಶಪಡಿಸಿಕೊಳ್ಳಲಾಗಿದ್ದು, ಆತನನ್ನು ಮಂಜಕೋಟೆ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು