ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಗಳಿಗೆ ಹೋಗಲು ಹೆದರುತ್ತಿದ್ದವರು ಈಗ ರಾಮ ನಮ್ಮವ ಎನ್ನುತ್ತಿದ್ದಾರೆ: ಯೋಗಿ

Last Updated 30 ಆಗಸ್ಟ್ 2021, 16:11 IST
ಅಕ್ಷರ ಗಾತ್ರ

ಲಖನೌ: ಈ ಹಿಂದೆ ದೇವಾಲಯಗಳಿಗೆ ಹೋಗಲು ಹೆದರುತ್ತಿದ್ದವರು ಇದೀಗ ಶ್ರೀರಾಮ ಮತ್ತು ಕೃಷ್ಣ ತಮ್ಮವರೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಮಥುರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼಕೋಮುವಾದಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭೀತಿಯಿಂದ ದೇವಾಲಯಗಳಿಗೆ ಹೋಗಲು ಅಂಜುತ್ತಿದ್ದವರು ಇದೀಗ ಶ್ರೀರಾಮ ನಮ್ಮವ, ಶ್ರೀಕೃಷ್ಣ ಕೂಡ ನಮ್ಮವ ಎಂದು ಹೇಳಿಕೊಳ್ಳುತ್ತಿದ್ದಾರೆʼ ಎಂದಿದ್ದಾರೆ.

ʼಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ದೇಶದ ರಾಷ್ಟ್ರಪತಿಗಳು ಅಯೋಧ್ಯೆಗೆ ಭೇಟಿ ನೀಡಿ, ರಾಮ ಮಂದಿರ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನವ ಭಾರತದಲ್ಲಿ ಇದು ಸಾಧ್ಯವಾಗಿದೆʼ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಮಥುರಾದಲ್ಲಿ 90 ನಿಮಿಷ ಇದ್ದ ಉತ್ತರ ಪ್ರದೇಶಸಿಎಂ ಯೋಗಿ,ರಾಮಲೀಲಾ ಮೈದಾನಕ್ಕೆ ತೆರಳಿ ಕೃಷ್ಣೋತ್ಸವಕ್ಕೆ ಚಾಲನೆ ನೀಡುವುದಕ್ಕೂ ಮುನ್ನಶ್ರೀಕೃಷ್ಣ ಜನ್ಮಸ್ಥಾನದ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.ಯೋಗಿ, ಕೃಷ್ಣ ಜನ್ಮಾಷ್ಟಮಿಯಂದು ಇದೇ ಮೊದಲಸಲ ಮಥುರಾಗೆ ಆಗಮಿಸಿದ್ದರು ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT