ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 6ನೇ ದಿನ ತೈಲ ಬೆಲೆ ಏರಿಕೆ: ಬೆಂಗಳೂರಲ್ಲಿ ಎಷ್ಟಿದೆ ಪೆಟ್ರೋಲ್‌, ಡೀಸೆಲ್‌ ದರ?

Last Updated 10 ಅಕ್ಟೋಬರ್ 2021, 5:42 IST
ಅಕ್ಷರ ಗಾತ್ರ

ದೆಹಲಿ: ಸತತ ಆರನೇ ದಿನವೂ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ 30 ಪೈಸೆ ಏರಿಕೆಯಾಗಿದ್ದು, ಲೀಟರ್‌ಗೆ ₹104.14 ಆಗಿದೆ. ಡೀಸೆಲ್‌ 35 ಪೈಸೆ ಏರಿದ್ದು ₹92.82 ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ ಮೇಲೆ 29 ಪೈಸೆ ಏರಿಕೆಯಾಗಿದ್ದು, ₹110.12 ಆಗಿದೆ. ಡೀಸೆಲ್ ಬೆಲೆ ಇಂದು ಲೀಟರ್‌ಗೆ 100.66 ಆಗಿದ್ದು, 37 ಪೈಸೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ 31 ಪೈಸೆ ಏರಿದೆ. ಇದರೊಂದಿಗೆ ಲೀಟರ್‌ಗೆ ₹107.77 ಆಗಿದೆ. ಇನ್ನು ಡೀಸೆಲ್‌ ದರ ಲೀಟರ್‌ ಮೇಲೆ 37 ಪೈಸೆ ಹೆಚ್ಚಳವಾಗಿದ್ದು, ಸದ್ಯ ₹98.52 ಆಗಿದೆ.

ಶಿರಸಿಯಲ್ಲಿ ಶನಿವಾರ ಡೀಸೆಲ್‌ ದರ ₹100ರ ಗಡಿ ದಾಟಿತ್ತು. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್‌ ₹100ಕ್ಕಿಂತಲೂ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT