ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಬೆಲೆ ಏರಿಕೆ ಕಾಣುವುದಿಲ್ಲ: ಪ್ರಿಯಾಂಕಾ ಗಾಂಧಿ

Last Updated 5 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ನವದೆಹಲಿ: ಹಿಟ್ಟು, ಅಕ್ಕಿ, ಅಡುಗೆ ಅನಿಲ ಎಲ್ಲವುಗಳ ಬೆಲೆ ಏರಿಕೆಯಾಗಿದೆ. ಆದರೆಪ್ರಧಾನಿ ನರೇಂದ್ರ ಮೋದಿಗೆ ಬೆಲೆ ಏರಿಕೆಯಾಗಿರುವುದು ಕಾಣುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್‌ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಅವರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕೂರಿಸಿದ ನಂತರ ಪತ್ರಕರ್ತರ ಜತೆಗೆ ಪ್ರಿಯಾಂಕಾ ಮಾತನಾಡಿದರು. ‘ಬೆಲೆ ಏರಿಕೆಯಾಗುತ್ತಿರುವುದುಮೋದಿ ಅವರ ಸಚಿವರಿಗೆ ಕಾಣಿಸುತ್ತಿಲ್ಲ. ಅದನ್ನು ಮೋದಿ ಅವರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ನಾವು ಪ್ರಧಾನಿ ನಿವಾಸದತ್ತ ಹೊರಟಿದ್ದೆವು. ಅವರಿಗೆ ಅತಿ ಹಣದುಬ್ಬರ, ಬೆಲೆ ಏರಿಕೆಯನ್ನು ತೋರಿಸಬೇಕು ಎಂದುಕೊಂಡಿದ್ದೆವು’ ಎಂದು ಪ್ರಿಯಾಂಕಾ ಹೇಳಿದರು.

‘ಮೋದಿ ಅವರ ಪಾಲಿಗೆ ಹಣದುಬ್ಬರ ಇಲ್ಲವೇ ಇಲ್ಲ ಬಿಡಿ. ಅವರು ದೇಶದ ಸಂಪತ್ತೆಲ್ಲವನ್ನೂ ಕೆಲವೇ ಜನರಿಗೆ ಹಂಚಿದ್ದಾರೆ. ಆ ಕೆಲವು ಜನರು ಮಾತ್ರ ಶ್ರೀಮಂತರಾಗುತ್ತಲೇ ಇದ್ದಾರೆ, ಸಾಮಾನ್ಯ ಜನರು ಬಡವರಾಗುತ್ತಲೇ ಇದ್ದಾರೆ. ಅವರ ಬಳಿ ಸಾಕಷ್ಟು ಹಣವಿದೆ, ಹೀಗಾಗಿ ಅವರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟುವುದಿಲ್ಲ’ ಎಂದು ಪ್ರಿಯಾಂಕಾ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT